ಮರಗಳ ಮಾರಣ ಹೋಮ

ಮರಗಳ ಮಾರಣ ಹೋಮ

ಹಸಿರೇ ಉಸಿರು ಹಸಿರಿನಿಂದಲೇ ನಮ್ಮ ಬದುಕು. ಸುತ್ತಮುತ್ತ ಹಸಿರಿದ್ದರೆ ಮಾತ್ರ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ನಮಗೆ ಆರೋಗ್ಯ ಕೊಡುವಂತಹ ಹಸಿರು ಗಿಡಮರಗಳನ್ನೇ ಬೆಂಗಳೂರು ನಗರಗಳಲ್ಲಿ ಇತ್ತೀಚಿಗೆ ಮರಗಳ ಮಾರಣಹೋಮ ಮಾಡುತ್ತಿದ್ದಾರೆ.

ಹೌದು, ಕೆಆರ್ ಪುರ. ಅಪಾರ್ಟ್ ಮೆಂಟ್ ಕಾಂಪೌಂಡ್ ಒಳಗಿರುವ ಹಲವು ಮರಗಳನ್ನ ಯಾವುದೇ ರೀತಿಯ ಅನುಮತಿ ಪಡೆಯದೆ ಅಕ್ರಮವಾಗಿ ಕಡಿದು ಮರಗಳ ಮಾರಣ ಹೋಮ ಮಾಡಿದ್ದಾರೆಂದು ಅಸೋಸಿಯೇಷನ್ ಸದಸ್ಯ ತಂದೀಪ್ ಆರೋಪಿಸಿದ್ದಾರಲ್ಲದೆ ಅಕ್ರಮವಾಗಿ ಮರ ಕಡೆದವರ ವಿರುದ್ಧ ಕ್ರಮ ಜರುಗಿಸುವಂತೆ ಬಿಡಿಎ. ಅಧಿಕಾರಿಗಳಿಗೆ ಆಗ್ರಹಿಸಿದರು.

ಬೆಂಗಳೂರು ಪೂರ್ವ ತಾಲ್ಲೂಕಿನ ದೊಡ್ಡಬನಹಳ್ಳಿಯಲ್ಲಿ‌ ಬಿಡಿಎ ಸರಿ ಸುಮಾರು 1400 ಫ್ಲಾಟ್ ಗಳನ್ನು ಎರಡು ಹಂತದಲ್ಲಿ ನಿರ್ಮಾಣ ಮಾಡಿದೆ. ಈ ವಸತಿ ಸಮುಚ್ಚಯದಲ್ಲಿ ಮಿನಿ ಫಾರೆಸ್ಟ್ ಕಾಂಸೆಪ್ಟ್ ಅಳವಡಿಸಿದ್ದು ಉತ್ತಮವಾದ ಮರಗಿಡಗಳನ್ನು ಬೆಳೆಸಿದ್ದಾರೆ. ಆದರೆ ಈ ಹಿಂದಿನ ಸರ್ಕಾರ ಮತ್ತು ಬಿಡಿಎ ಅದ್ಯಕ್ಷರಾಗಿದ್ದ ಎಸ್ ಆರ್ ವಿಶ್ವನಾಥ್ ರವರು ಬೆಂಗಳೂರಿನ ಎಲ್ಲಾ ಬಿಡಿಎ ಸಮುಚ್ಚಯಗಳಿಗೂ ಮಕ್ಕಳು ಆಟವಾಡಲು ಮತ್ತು ವಯಸ್ಕರಿಗಾಗಿ ತೆರೆದ ಜಿಮ್ ಮಾಡಲು ಆದೇಶಿಸಿದ್ದರು.

ಅದು ಈಗ ಮುನ್ನೆಲೆಗೆ ಬಂದಿದ್ದು ತರಾತುರಿಯಲ್ಲಿ ನಿರ್ಮಾಣ ಮಾಡಲು ಗುತ್ತಿಗೆದಾರರು ಮುಂದಾಗಿದ್ದು ಬಿಡಿಎ ಚಂದ್ರಗಿರಿ ಅಪಾರ್ಟ್ ಮೆಂಟ್ ನಲ್ಲಿ ಬೆಳೆದು ನಿಂತು ನೆರಳು ನೀಡುತ್ತಿದ್ದ ಉತ್ತಮವಾದ ಕೆಲವು ಮರಗಳನ್ನು ಕಡಿದು ಹಾಕಿದ್ದಾರೆ.ಇದಕ್ಕೆ ಕಾರಣರಾದವರು ಯಾರೇ ಆಗಲಿ ಅವರ ವಿರುದ್ದ ಕ್ರಮ ಜರುಗಿಸಿ ಎಂದು ಮನವಿ ಮಾಡಿದ್ದಾರೆ.

ಇವರಿಗೆ ಹಲವರು ದ್ವನಿಗೂಡಿಸಿದ್ದು ಪುಷ್ಟಾ, ಸತೀಶ್, ನಾಸೀರ್, ಭೀಮರಾಜು, ಸಾದೀಕ್, ಹರಿನಾಥ್ ಸೇರಿ ಹಲವು ಅಪಾರ್ಟ್ ಮೆಂಟ್ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ.

(ನಾನು ನೆಟ್ಟು ಬೆಳೆಸಿದ ನೇರಳೆ ಮರ ಅದರಲ್ಲಿ ಬೆಳೆದ ಕೆಲ ನೇರಳೆ ಹಣ್ಣುಗಳು ನಾನು ತಿಂದೆ, ಈಗ ಅದನ್ನು ಕಡಿದು ಹಾಕಿರುವುದು ನೋವುಂಟು ಮಾಡಿದೆ, ಇದರ ಬಗ್ಗೆ ಹಲವು ಸಲ ಅಸೋಸಿಯೇಷನ್ ಅದ್ಯಕ್ಷರನ್ನ ಬೇಡಿಕೊಂಡರು ಮರ ಕಡಿದಿರುವುದು ಬೇಸರ ತರೆಸಿದೆ. ಡೆಬೊ ಸ್ಮಿತಾ, 10 ನೇ ತರಗತಿ ವಿದ್ಯಾರ್ಥನಿ)

Related