ಖಾಸಗಿ ಆಸ್ಪತ್ರೆಗಳಿಂದ ಹಗಲು ದರೋಡೆ

ಖಾಸಗಿ ಆಸ್ಪತ್ರೆಗಳಿಂದ ಹಗಲು ದರೋಡೆ

ವಿಜಯಪುರ : ಜಿಲ್ಲೆಯಲ್ಲಿ ಕೋವಿಡ್ ಹೆಸರಿನಲ್ಲಿ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಹಗಲು ದರೋಡೆ ಮಾಡಲು ಬಿಟ್ಟಿದ್ದು, ಇದರಿಂದ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಪ್ ಆರೋಪಿಸಿದರು.

ಕಾಂಗ್ರೆಸ್‌ಯಿಂದ ನಗರದ ವಾರ್ಡ್ ನಂ.19, 24 ಮತ್ತು 26ರಲ್ಲಿ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ಹಸ್ತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರ್ಕಾರದ ನಿರ್ಲಕ್ಷ್ಯದಿಂದ ರಾಜ್ಯದಲ್ಲಿ ಕೊರೋನಾ ಹೆಚ್ಚಾಗಿದೆ. ಈ ರೋಗದ ಬಗ್ಗೆ ನಿರ್ಲಕ್ಷ್ಯವಹಿಸಿರುವುದು ದುರಾದೃಷ್ಟಕರ ಎಂದು ಹೇಳಿದರು.

ಕಾಂಗ್ರೆಸ್ ಹಮ್ಮಿಕೊಂಡಿರುವ ಆರೋಗ್ಯಹಸ್ತ ಕಾರ್ಯಕ್ರಮದ ಮುಖಾಂತರ ಜನರ ಸೇವೆ ಮಾಡಲು ನಮಗೆ ಸದಾವಕಾಶ ಸಿಕ್ಕಿದ್ದು, ಜನ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಸರ್ಕಾರ ಮಾಡಬೇಕಾದಂತ ಕೆಲಸವನ್ನು ಇಂದು ಕಾಂಗ್ರೆಸ್ ಮಾಡುತ್ತಿದೆ ಎಂದರು.

Related