ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅರ್ಜುನ್ ಸರ್ಜಾ ಪುತ್ರಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅರ್ಜುನ್ ಸರ್ಜಾ ಪುತ್ರಿ

ಚೆನ್ನೈ: ನಟ ಅರ್ಜುನ್ ಸರ್ಜಾ ಅವರ ಪುತ್ರಿ ಕಳೆದ ವರ್ಷವಷ್ಟೇ ಉಮಾಪತಿ ರಾಮಯ್ಯ ಮತ್ತು ಐಶ್ವರ್ಯ ಅರ್ಜುನ್ ಅವರ ಡೇಟಿಂಗ್ ಸುದ್ದಿ ಎಲ್ಲಂದರಲ್ಲಿ ಸುದ್ದಿಯಾಗಿತ್ತು. ಅದಾದ ಬಳಿಕ ಇವರಿಬ್ಬರು ಮನೆಯವರ ಒಪ್ಪಿಗೆ ಪಡೆದುಕೊಂಡು ಅಕ್ಟೋಬರ್ ತಿಂಗಳಿನಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಇದೀಗ ನಟ ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯ ಅರ್ಜುನ್ ಮತ್ತು ಉಮಾಪತಿ ರಾಮಯ್ಯ ಅವರು ಜೂನ್ 10ರಂದು ಚೆನ್ನೈನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಹೌದು, ಚೆನ್ನೈನ ಗೇರುಗಂಬಾಕ್ಕಂನಲ್ಲಿರುವ ಶ್ರೀ ಯೋಗಾ ಆಂಜನೇಯ ದೇವಸ್ಥಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಂಬಂಧಿಕರು ಮತ್ತು ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ವಿವಾಹ ನೆರವೇರಿತು. ಇದನ್ನೂ ಓದಿ: ಶಕ್ತಿ ಯೋಜನೆ ಅನುಷ್ಠಾನಕ್ಕೆ 1 ವರ್ಷ

ವಿವಾಹ ಸಮಾರಂಭದಲ್ಲಿ ಐಶ್ವರ್ಯಾ ಅವರೊಂದಿಗೆ ಪಟ್ಟತ್ತು ಯಾನೈ ಚಿತ್ರದಲ್ಲಿ ಕೆಲಸ ಮಾಡಿದ ನಟ ವಿಶಾಲ್ ಸೇರಿದಂತೆ ನಟರಾದ ಕಾರ್ತಿ, ಧ್ರುವ ಸರ್ಜಾ, ಜಗಪತಿ ಬಾಬು, ಸಮುದ್ರಕನಿ, ವಿಜಯಕುಮಾರ್ ಮತ್ತು ಸೆಂಥಿಲ್ ಭಾಗವಹಿಸಿದ್ದರು.

ಇದರೊಂದಿಗೆ ಕೆಎಸ್ ರವಿಕುಮಾರ್, ಜಿಕೆ ರೆಡ್ಡಿ, ಎಸ್ಆರ್ ಪ್ರಭು ಮತ್ತು ಕೆಇ ಜ್ಞಾನವೇಲ್ ರಾಜಾ ಕೂಡ ಭಾಗವಹಿಸಿದ್ದರು. ನಟಿ ಐಶ್ವರ್ಯಾ ಅವರು ತಮ್ಮ ವಿವಾಹದ ಫೋಟೊಗಳನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

 

Related