ಪತ್ರಿಕಾ ಬಳಗದಿಂದ ನೆರೆ ಸಂತ್ರಸ್ಥರಿಗೆ ದಾಸೋಹ ಸೇವೆ

ಪತ್ರಿಕಾ ಬಳಗದಿಂದ ನೆರೆ ಸಂತ್ರಸ್ಥರಿಗೆ ದಾಸೋಹ ಸೇವೆ

ಮುಗಳಖೋಡ- ಪತ್ರಕರ್ತರು ನೆರೆ ಪೀಡಿತ ಪ್ರದೇಶಗಳಿಗೆ ಭೇಟ್ಟಿ ನೀಡಿ ಗ್ರಾಮಸ್ಥರ ದೂರು ದುಮ್ಮಾನಗಳನ್ನು ಆಲಿಸಲು, ಆಗಮಿಸಿ ಸಂತ್ರಸ್ಥರಿಗೆ ದಾಸೋಹ ಸೇವೆ ಹಾಗೂ ಎಲ್ಲ ಮಕ್ಕಳಿಗೆ ನೋಟ್‌ಬುಕ್ ಹಾಗೂ ಪೆನ್ನುಗಳನ್ನು ವಿತರಿಸಿ ಸಾಮಾಜಿಕ ಕೈಂಕರ್ಯ ನಿಜಕ್ಕೂ  ಎಂದು ಖೇಮಲಾಪೂರ ಗ್ರಾ.ಪಂ ಅಧ್ಯಕ್ಷೆ ಸುಜಾತಾ ಚೌಗಲಾ ಹೇಳಿದರು.
ಖೇಮಲಾಪೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮುಗಳಖೋಡ ಪತ್ರಿಕಾ ಬಳಗದವರು “ ನಮ್ಮ ನಡೆ ನೊಂದವರ ಕಡೆ ” ಎಂಬ ಶೀರ್ಷಿಕೆ ಅಡಿ ಶನಿವಾರ ನೆರೆ ಸಂತ್ರಸ್ಥರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾದ ಪತ್ರಿಕಾ ದಿನಾಚರಣೆಯ ಆಧ್ಯಕ್ಷತೆ ವಹಿಸಿ ಮಾತನಾಡಿದರು. ನದಿ ತೀರಿದ ಜನರನ್ನು ಕೂಡಲೇ ಸ್ಥಳಾಂತರಿಸಿ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಪತ್ರಕರ್ತ ಚಿದಾನಂದ ಐಹೊಳೆ ಮಾತನಾಡಿ, ಸರ್ಕಾರಗಳ ಏರಿಳಿತಗಳ ಮಧ್ಯೆ ಸಂತ್ರಸ್ಥರಿಗೆ ಶಾಸ್ವತ ಪರಿಹಾರ ಕಂಡುಕೊಳ್ಳಲು ಪ್ರವಾಹ ಪೀಡಿತ ಜನರ ಪರವಾಗಿ ನಾವೂ ಸರ್ಕಾರ ಹಾಗೂ ಜನ ಪ್ರತಿನಿಧಿಗಳ ಗಮನ ಸೆಳೆದರೂ ಪ್ರಯೋಜನವಾಗದೆ ಇರಬಹುದು, ಆದರೆ ಪ್ರತಿಯೊಬ್ಬರಲ್ಲಿ ಬೇಕಾದ ಸೌಲಭ್ಯಗಳನ್ನು ಪಡೆಯುವವರೆಗೂ ಹೋರಾಟದ ಕಿಚ್ಚು ಇರಲೇಬೇಕೆಂದರು.
ಉಪನ್ಯಾಸಕ ಹಾಗೂ ಪತ್ರಕರ್ತ ಸಂಗಮೇಶ ಹಿರೇಮಠ ಮಾತನಾಡಿ, ಪ್ರವಾಹದಿಂದಾಗಿ ಎಷ್ಟೋ ಜನರು ತಮ್ಮ ಸೂರು ಜನ-ಜಾನುವಾರುಗಳನ್ನು ಕಳೆದುಕೊಂಡು, ಸಂಭಂಧಿಕರಿಂದ ದೂರಾದರೆ ವಿದ್ಯಾರ್ಥಿಗಳು ಪಠ್ಯ ಪುಸ್ತಕ ನೋಟ್‌ಬುಕ್‌ಗಳನ್ನು ಕಳೆದುಕೊಂಡು ದೂರವಾಗಿದ್ದಾರೆ. ಅಂತಹವರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯವರು ಪಠ್ಯ ಪುಸ್ತಕಗಳನ್ನು ದೊರಕಿಸಿಕೊಡಬೇಕು ಮತ್ತು ಹಳ್ಳಿಯಿಂದ ದಿಲ್ಲಿಯವರೆಗೂ ಒಂದೆ ಸರ್ಕಾರ ಇರುವುದರಿಂದ ಈ ಬಾರಿಯಾದರೂ ಸರ್ಕಾರ ಸಂತ್ರಸ್ಥರ ಕಷ್ಟಗಳಿಗೆ ಶಾಸ್ವತ ಪರಿಹಾರ ದೊರಕಿಸಿಕೊಡಬೇಕೆಂದು ಹೇಳಿದರು.
ಕುಡಚಿ ಮಂಡಲದ ಬಿಜೆಪಿ ಅಧ್ಯಕ್ಷ ಮಲ್ಲಿಕಾರ್ಜುನ ಖಾನಗೌಡ ಮಾತನಾಡಿ ಪತ್ರಕರ್ತರ ಈ ಕಾರ್ಯಗಳನ್ನು ಮುಕ್ತಕಂಠದಿAದ ಕೊಂಡಾಡಿದ ಬಳಿಕ ರಾಜ್ಯ ಸರ್ಕಾರ ನೆರೆಸಂತ್ರಸ್ಥರಿಗೆ ಪರಿಹಾರ ಒದಗಿಸಲು ಸದಾಬದ್ಧವಾಗಿದ್ದು ಅದರಂತೆ ಕುಡಚಿ ಶಾಸಕ ಪಿ ರಾಜೀವ್ ಅವರ ಮಾರ್ಗದರ್ಶನದಂತೆ ಗ್ರಾಮಸ್ಥರು ಶಿಸ್ತು ಬದ್ಧವಾಗಿ ಕೃಷ್ಣಾ ನದಿ ತೀರದ ಮಹಾಪೂರದ ಹಿನ್ನಲೆಯಲ್ಲಿ ಸಂತ್ರಸ್ತರಿಗೆ ಊಟ, ವಸತಿ, ಜಾನುವಾರುಗಳಿಗೆ ಮೇವು ಹಾಗೂ ಮೂಲ ಸೌಕರ್ಯಗಳನ್ನು ಒದಗಿಸಿ ರಾಯಬಾಗದಲ್ಲಿಯೇ ಮಾದರಿ ಗಂಜಿ ಕೇಂದ್ರವನ್ನಾಗಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ಖೇಮಲಾಪೂರ ಗಂಜಿ ಕೇಂದ್ರ ನಂ.1 ರ 680 ಜನರಿಗೆ ಹಾಗೂ 90 ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಹಾಗೂ 90 ವಿದ್ಯಾರ್ಥಿ ವಿದ್ಯಾರ್ಥಿನೀಯರಿಗೆ ನೋಟ್‌ಬುಕ್ ಹಾಗೂ ಪೆನ್‌ಗಳನ್ನು ಮುಗಳಖೋಡ ಪತ್ರಿಕಾ ಬಳಗದ ವತಿಯಿಂದ ಹಂಚಿಕೆ ಮಾಡಿಲಾಯಿತು.
ತತ್‌ಕ್ಷಣ ದೌಡಾಯಿಸಿದ ಅಧಿಕಾರಿಗಳು
ಖೇಮಲಾಪೂರ ಗ್ರಾಮದ ಗಂಜಿ ಕೇಂದ್ರದಲ್ಲಿದ್ದ ಸಂತ್ರಸ್ಥರು ತಮ್ಮ ಅಳಲನ್ನು ಪತ್ರಕರ್ತರೊಂದಿಗೆ ಹಂಚಿಕೊಂಡಾಗ ತತ್‌ಕ್ಷಣ ದೌಡಾಯಿಸಿದ ರಾಯಬಾಗ ನ್ಯಾಯಾಧೀಶ ಬಸವರಾಜಪ್ಪ ಕೆ ಎಮ್ ಹಿರಿಯ ಶ್ರೇಣಿ ದಿವಾನಿ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ತಹಶೀಲ್ದಾರ ರಿಯಾಜುದ್ದಿನ್ ಭಾಗವಾನ ಹಾಗೂ ಕುಡಚಿ ಪಿಎಸ್‌ಐ ಶಿವರಾಜ್ ಧರಿಗೊಂಡ ಸ್ಥಳಕ್ಕಾಗಮಿಸಿ ನೆರೆ ಸಂತ್ರಸ್ತರೊAದಿಗೆ ಕುಂದು ಕೊರತೆಗಳ ಕುರಿತು ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ರಾಯಬಾಗ ನ್ಯಾಯಾಧೀಶ ಬಸವರಾಜಪ್ಪ ಕೆ ಎಮ್ ರವರು ಆರೋಗ್ಯ ದೃಷ್ಠಿಯಿಂದ ಎಲ್ಲರೂ ಸರಿಯಾಗಿ ಕೋವಿಡ್ ನಿಯಮ ಪಾಲನೆ ಮಾಡಬೇಕು, ಎಲ್ಲರಿಗೂ ಸರಕಾರಿ ಸೌಲಭ್ಯಗಳು ಪರಿಹಾರ ವೈಧ್ಯಕೀಯ ಸೌಲಭ್ಯ ಊಟೋಪಚಾರ ಶಿಸ್ತು ಬದ್ಧಾಗಿ ನಡೆಯಬೇಕು ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು.
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ನಿಂಗಪ್ಪ ಬಿರನಗಡ್ಡಿ, ಸ್ವಾಗತಿಸಿ ನಿರೂಪಿಸಿದರು. ಪತ್ರಕರ್ತ ಸಂತೋಷ ಮುಗಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತರಾದ ಅಜಯ ತೇರದಾಳ, ಎಸ್ ಎಸ್ ಹಿರೇಮಠ, ಬಾಳೇಶ ಕೋಟಿನತೋಟ. ಗ್ರಾ ಪಂ ಉಪಾಧ್ಯಕ್ಷ ಸತ್ಯಪ್ಪ ಖವಟಗೊಪ್ಪ, ಗ್ರಾ ಪಂ ಸದಸ್ಯ ಶ್ರೀಕಾಂತ ಕಧಮ್, ಮೃತ್ಯುಂಜಯ ಮಠಪತಿ, ಮಹಾಂತೇಶ ಧೂಪದಾಳ, ಸದಾ ವಡಗಿ, ಶಂಕರ ಮಠಪತಿ, ಮಹಾದೇವ ಮಗದುಮ್, ಕುಮಾರ ಕಾಂಬಳೆ, ಸೌರಭ ಚೌಗಲಾ, ಪ್ರಧಾನಗುರು ಆರ್ ಡಿ ಕೆಳಗಡೆ, ಶಿಕ್ಷಕ ಕುಶಾಲ ಹಳಕಲ್ ಹಾಗೂ ಪುಟ್ಟಮ್ಮ ಗಸ್ತಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.

Related