ದರ್ಶನ್​ಗೆ ಶಿಕ್ಷೆಯಾಗಬೇಕು; ಭಾವನಾ ಬೆಳಗೆರೆ

ದರ್ಶನ್​ಗೆ ಶಿಕ್ಷೆಯಾಗಬೇಕು; ಭಾವನಾ ಬೆಳಗೆರೆ

ಚಿತ್ರದುರ್ಗ: ನಟ ದರ್ಶನ್ ತೂಗುದೀಪ್ ಜೊತೆ 10 ಜನ ಸೇರಿಕೊಂಡು ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎಂಬ ವ್ಯಕ್ತಿಯನ್ನು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟ ದರ್ಶನ್ ಅವರಿಗೆ ಪೊಲೀಸ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಇನ್ನು ಪೊಲೀಸರ ವಶದಲ್ಲಿರುವ ನಟ ದರ್ಶನವರಿಗೆ ಶಿಕ್ಷೆ ಆಗಬೇಕು ಎಂದು ಭಾವನಾ ಬೆಳೆಗೆರವರು ಹೇಳಿದ್ದಾರೆ. ಇಂದು ಚಿತ್ರದುರ್ಗಕ್ಕೆ ರೇಣುಕಾ ಸ್ವಾಮಿ ಅವರ ನಿವಾಸಕ್ಕೆ ಭವನ ಬೆಳಕಿರವರು ಭೇಟಿ ಮಾಡಿ, ರೇಣುಕಾ ಕುಮಾರಸ್ವಾಮಿ ಪತ್ನಿ ಮತ್ತು ಅವರ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾನೂನು ರೀತಿಯಲ್ಲಿ ನಟ ದರ್ಶನವರಿಗೆ ಯಾವ ರೀತಿ ಶಿಕ್ಷೆ ಆಗಬೇಕು ಅದೆಲ್ಲವನ್ನು ಕಾನೂನು ವ್ಯವಸ್ಥೆಯಲ್ಲಿ ಶಿಕ್ಷೆ ನೀಡಬೇಕೆಂದು ಹೇಳಿದ್ದಾರೆ. ಇದನ್ನೂ ಓದಿ: ದರ್ಶನ್​ಗೆ ಶಿಕ್ಷೆಯಾಗಬೇಕು; ಭಾವನಾ ಬೆಳಗೆರೆ

ಯಾವ ಅಭಿಮಾನವೂ ಸಾವು ಬಯೋಸೋದಿಲ್ಲ, ದರ್ಶನ್, ಒಂದೊಮ್ಮೆ ಹೊಡಿಯಿರಿ, ಕೊಲ್ಲಿಸಿ ಅಂತಾ ಹೇಳಿದ್ದರೆ ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದಿದ್ದಾರೆ ಭಾವನಾ. ರೇಣುಕಾ ಸ್ವಾಮಿಯ ಪತ್ನಿಯನ್ನು ನೋಡಿ ಕಣ್ಣಿನಲ್ಲಿ ನೀರು ಬಂತು. ರೇಣುಕಾ ಸ್ವಾಮಿ ಪತ್ನಿ 5 ತಿಂಗಳ ಗರ್ಭಿಣಿ, ಆಕೆ ಪಾಪ ಬಹಳಾ ಮುಗ್ಧರು, ನೊಂದುಕೊಂಡಿದ್ದಾರೆ. ಅವರಿಗೆ ಏನಾಗಿದೆ, ಏನಾಗುತ್ತಿದೆ ಏನೂ ಗೊತ್ತಾಗುತ್ತಿಲ್ಲ. ರೇಣುಕಾ ಸ್ವಾಮಿ ಮನೆಯಲ್ಲಿ 97 ವರ್ಷದ ಅಜ್ಜಿ ಇದ್ದಾರೆ, ಇನ್ನೊಬ್ಬ ಅಜ್ಜಿಯೂ ಇದ್ದಾರೆ. ಅವರಿಗೆ ಮೊಮ್ಮಗನಿಗೆ ಏನಾಗಿದೆ ಎಂಬುದು ಗೊತ್ತಾಗುತ್ತಿಲ್ಲ. ಮೊಮ್ಮಗ ಗುಣವಾಗಿ ಬರುತ್ತಾನೆ ಅನ್ನುತ್ತಿದ್ದಾರೆ. ಪ್ರಕರಣದ ಬಗ್ಗೆ ಅಜ್ಜಿಯವರಿಗೆ ಗೊತ್ತಾಗಿಲ್ಲ. ರೇಣುಕಾಸ್ವಾಮಿ ತುಂಬಾ ಅಮಾಯಕ, ಆತ ದರ್ಶನ ಅಭಿಮಾನಿ ಅಲ್ಲ, ಫಾಲೋವರ್ ಸಹ ಅಲ್ಲ, ಫೇಸ್ ಬುಕ್, ದರ್ಶನ ಜೊತೆಗಿನ ಸಂಬಂಧದ ಬಗ್ಗೆ ಮನೆಯವರಿಗೆ ಏನು ಗೊತ್ತಿಲ್ಲ ಎಂದಿದ್ದಾರೆ.

 

Related