ಡ್ಯಾನ್ಸ್ಗೆ ಅಭಿಮಾನಿಗಳು ಫಿದಾ

ಆಸ್ಟ್ರೇಲಿಯಾ, ಮಾ. 01 : ಮಹಿಳಾ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಈಗಾಗಲೇ ಟೀಂ ಇಂಡಿಯಾ ಸೆಮಿ ಫೈನಲ್ ಪ್ರವೇಶಿಸಿದೆ. ಇಂದು ಶ್ರೀಲಂಕಾ ವಿರುದ್ಧ ಸಹ ಟೀಂ ಇಂಡಿಯಾ 7 ವಿಕೆಟ್ ಮೂಲಕ ಭರ್ಜರಿ ಗೆದ್ದಿದೆ. ಇವತ್ತಿನ ಪಂದ್ಯಕ್ಕೂ ಮೊದಲು ಜೆಮಿಮಾ ರೋಡ್ರಿಗಸ್ ಲವ್ ಆಜ್ ಕಲ್ 2 ಚಿತ್ರದ ಹಾಡೊಂದಕ್ಕೆ ಆಸ್ಟ್ರೇಲಿಯಾದ ಯುವತಿಯರಿಗೆ ಡ್ಯಾನ್ಸ್ ಹೇಳಿಕೊಟ್ಟು ಹೆಜ್ಜೆ ಹಾಕುವ ವಿಡಿಯೋ ಮತ್ತೆ ಐಸಿಸಿ ತನ್ನ ಅಧಿಕೃತ ಇನ್ಟಾಗ್ರಾಮ್ನಲ್ಲಿ ಪ್ರಕಟಿಸಿದೆ.
ಟೀಮ್ ಇಂಡಿಯಾ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಇತ್ತೀಚೆಗೆ ಕಾರ್ಯನಿರತ ಸೆಕ್ಯೂರಿಟಿ ಗಾರ್ಡ್ಯೊಂದಿಗೆ ಡ್ಯಾನ್ಸ್ ಮಾಡುವುದರೊಂದಿಗೆ ಟ್ವಿಟ್ಟರ್ನಲ್ಲಿ ಸದ್ದು ಮಾಡಿದ್ದರು.
ಕ್ರಿಕೆಟ್ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಅವರು ‘ಲವ್ ಆಜ್ ಕಲ್ 2’ ಚಿತ್ರದ ಹಾಡೊಂದಕ್ಕೆ ಸೆಕ್ಯೂರಿಟಿ ಗಾರ್ಡ್ ಜೊತೆ ಹೆಜ್ಜೆ ಹಾಕುವ ವಿಡಿಯೋ ಮಾಡಿದ್ದರು. ಈ ಹೆಜ್ಜೆ ಹಾಕಿರುವ ವಿಡಿಯೋವನ್ನ ಐಸಿಸಿವು ತನ್ನ ಅಧಿಕೃತ ಟ್ವಿಟರ್ನಲ್ಲಿ ಪೊಸ್ಟ್ ಮಾಡಿತ್ತು. ಇದಕ್ಕೆ ಶಹಬ್ಬಾಸ್ಗಿರಿ ಸಹ ಬಂದಿದ್ದವು.

Related