ಮದುವೆಗೆ ಒಪ್ಪದ ಮಗನಿಗೆ ಕಚ್ಚಿಕಚ್ಚಿ ಹಾಕಿದ ಅಪ್ಪ !

ಮದುವೆಗೆ ಒಪ್ಪದ ಮಗನಿಗೆ ಕಚ್ಚಿಕಚ್ಚಿ ಹಾಕಿದ ಅಪ್ಪ !

ಅಹಮದಾಬಾದ್ : ತನ್ನ ಅಮ್ಮ ಬದುಕಿರುವಾಗಲೇ ಅಪ್ಪ ಇನ್ನೊಂದು ಮದುವೆಯಾಗಲು ಹೊರಟಿದ್ದನ್ನು ತಡೆದಿದ್ದಕ್ಕೆ ಮಗನನ್ನು ಅಪ್ಪ ಕಚ್ಚಿಕಚ್ಚಿ ಗಾಯಗೊಳಿಸಿರುವ ಘಟನೆ ದರಿಯಾಪುರದಲ್ಲಿ ನಡೆದಿದೆ.

ಈತನ ಅಪ್ಪ ನಯೀಮುದ್ದೀನ್ ಮೂರು ವರ್ಷಗಳಿಂದ ಕುಟುಂಬದ ಜತೆ ಸಂಪರ್ಕ ಕಳೆದುಕೊಂಡಿದ್ದು, ಅದೇ ಮನೆಯ ನೆಲಮಹಡಿಯಲ್ಲಿ ವಾಸವಿದ್ದಾನೆ. ಅಮ್ಮ-ಮಗ ಮೊದಲ ಮಹಡಿಯಲ್ಲಿ ಇದ್ದಾರೆ.

ನಿನ್ನೆ ಮೊದಲ ಮಹಡಿಗೆ ಹೋದ ನಯೀಮುದ್ದೀನ್ ತಾನು ಇನ್ನೊಂದು ಮದುವೆಯಾಗುವುದಾಗಿ ಹೇಳಿದ್ದಾನೆ. ಇದಕ್ಕೆ ಮಗ ಪ್ರತಿರೋಧ ವ್ಯಕ್ತಪಡಿಸಿದ್ದಾನೆ.
ಇದಕ್ಕೆ ಸಂಬಂಧಿಸಿದಂತೆ ಅಪ್ಪ-ಮಗನ ನಡುವೆ ವಾಗ್ವಿವಾದ ಆಗಿದೆ. ಇದರಿಂದ ಸಿಟ್ಟಿಗೆದ್ದ ನಯೀಮುದ್ದೀನ್, ಕಿವಿ, ಮಗನ ಭುಜ ಮತ್ತು ಕೆನ್ನೆಗೆ ಕಚ್ಚಿದ್ದಾನೆ. ಅಲ್ಲದೆ ಪಕ್ಕದಲ್ಲಿದ್ದ ಪತ್ನಿ ಜುಬೇದಬಾನೋ ಮುಖಕ್ಕೂ ಹೊಡೆದಿದ್ದಾನೆ.

ತಂದೆಯ ವರ್ತನೆಯಿಂದ ಗಾಬರಿಗೊಂಡ ಮಗ ಯಹ್ಯಾ ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಅಲ್ಲದೆ ತನ್ನ ತಂದೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Related