ಅಮೃತ ಮಹೋತ್ಸವದ ಕಾರ್ಯಕ್ರಮದಲ್ಲಿ ಡಿ ಬಾಸ್

ಅಮೃತ ಮಹೋತ್ಸವದ ಕಾರ್ಯಕ್ರಮದಲ್ಲಿ ಡಿ ಬಾಸ್

ಬೆಂಗಳೂರು: ಬೆಂಗಳೂರಿನ ಎಚ್ಎಸ್ಆರ್ ಬಡಾವಣೆಯ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ  ಸಂಜೆ ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಾಗಿಯಾಗಿದ್ದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಶುಭಾಶಯಗಳು ಕೋರಿದರು. ನಾವೆಲ್ಲರೂ ಇಂದು 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯಲ್ಲಿದ್ದೇವೆ. ಸ್ವಾತಂತ್ರ್ಯ ಎಂದರೆ ನಮ್ಮ ಕಣ್ಣ ಮುಂದೆ ಕಾಣಿಸುವುದೆಂದರೆ ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಇನ್ನು ಹಲವಾರು ಹೋರಾಟಗಾರರು ನಮ್ಮ ಮುಂದೆ ಬರುತ್ತಾರೆ.

ಇಷ್ಟೇ ಅಲ್ಲದೆ ಎಷ್ಟೋ ಜನ ದೇಶಕ್ಕೋಸ್ಕರ ತಮ್ಮ ಜೀವನವನ್ನು ತ್ಯಾಗ ಮಾಡಿದ್ದಾರೆ ದೇಹವನ್ನು ಮುಡಿಪಾಗಿಟ್ಟಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕೋಸ್ಕರ ದೇಹವನ್ನು  ಮುಡಿಪಾಗಿಟ್ಟಿರುವ ಹೋರಾಟಗಾರರಿಗೆ ವೇದಿಕೆಯ ಮೇಲೆ ಎರಡು ನಿಮಿಷಗಳ ಕಾಲ ಮೌನಚರಣೆಯನ್ನು  ಮಾಡಿ ದೇಶಪ್ರೇಮ ಮೆರೆದರು.

ಬಹಳ ದಿನಗಳ ನಂತರ ವೇದಿಕೆ ಮೇಲೆ ಕಾಣಿಸಿರುವ  ದರ್ಶನ್ ರನ್ನು  ನೋಡಲು ಅಭಿಮಾನಿಗಳು ಕಣ್ತುಂಬಿ ಕೊಂಡರು.

ಕಾರ್ಯಕ್ರಮದಲ್ಲಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ, ಕಾರ್ಯಕರ್ತರು ಎಚ್ಎಸ್ಆರ್ ಬಡಾವಣೆಯ ಪ್ರಮುಖರು  ಮುಂತಾದವರು  ಉಪಸ್ಥಿತರಿದ್ದರು.

 

Related