ಎಲ್ಲೆಲ್ಲೂ ರಾರಾಜಿಸುತ್ತಿವೆ, ದೊಡ್ಮನೆ ಹುಡುಗನ ಕಟ್ಟೌಟ್ಸ್

ಎಲ್ಲೆಲ್ಲೂ ರಾರಾಜಿಸುತ್ತಿವೆ, ದೊಡ್ಮನೆ ಹುಡುಗನ ಕಟ್ಟೌಟ್ಸ್

ಬೆಂಗಳೂರು: ಇಂದಿನಿಂದ ರಾಜ್ಯದಾದ್ಯಂತ ದೊಡ್ಮನೆ ಹುಡುಗ ನಟನೆಯ ಯುವ ಚಿತ್ರ ಬಿಡುಗಡೆಯಾಗಿದ್ದು ರಾಜ್ಯದಾದ್ಯಂತ ಯುವನ ಕಟೌಟ್ ರಾರಾಜಿಸುತ್ತಿವೆ.

ಹೌದು, ನಟ ಹಾಗೂ ನಿರ್ಮಾಪಕ ರಾಘವೇಂದ್ರ ರಾಜಕುಮಾರ್ ಅವರ ಪುತ್ರ ಯುವ ಚಿತ್ರದ ಮೂಲಕ ನಟನೆ ಮಾಡಿ ಅಭಿಮಾನಿಗಳ ಮುಂದೆ ಬಂದಿದ್ದಾರೆ.

ಯುವನ ನಟನೆಯನ್ನು ನೋಡಿ ಅಭಿಮಾನಿಗಳು ಫುಲ್ ಖುಷಿ ಆಗಿದ್ದು ಎಲ್ಲೆಲ್ಲೂ ಅಪ್ಪು ಮತ್ತು ಯುವನ ಕಟೌಟ್ ರಾರಾಜಿಸುತ್ತಿವೆ.

ಇನ್ನು ಬೆಂಗಳೂರಿನ ಸಿದ್ದೇಶ್ವರ ಥಿಯೇಟರ್​ನಲ್ಲಿ ಮುಂಜಾನೆಯಿಂದಲೇ ಫ್ಯಾನ್ಸ್​ ಶೋ ಪ್ರದರ್ಶನ ಕಂಡಿದೆ. ರಾಜ್ಯದಲ್ಲಿ 250 ಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ಈ ಚಿತ್ರ ಬಿಡುಗಡೆ ಆಗಿದೆ ಅನ್ನೋದು ವಿಶೇಷ.

ಜೆಪಿ ನಗರದ ಸಿದ್ದೇಶ್ವರ ಥಿಯೇಟರ್ ಎದುರು ಯುವ ಅವರ ಕಟೌಟ್​ಗಳನ್ನು ಹಾಕಲಾಗಿದೆ. ಮುಂಜಾನೆಯ ಶೋ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ‘ಯುವ’ ಚಿತ್ರಕ್ಕೆ ಸಂತೋಷ್ ಆನಂದ್​ರಾಮ್ ನಿರ್ದೇಶನ ಮಾಡಿದ್ದಾರೆ. ಯುವ ಜೊತೆ ಸಪ್ತಮಿ ಗೌಡ ನಟಿಸಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಯುವನ ಲಾಂಚ್ ಮಾಡಿದೆ.

Related