ಜೀರಿಗೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಇದು ಮನೆ ಮದ್ದು!

ಜೀರಿಗೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಇದು ಮನೆ ಮದ್ದು!

ಜೀರಿಗೆ ಸಾಮಾನ್ಯವಾಗಿ ಎಲ್ಲರ ಅಡುಗೆ ಮನೆಯಲ್ಲಿ ಸಿಗುವಂತ ಪದಾರ್ಥ ಇದಾಗಿದ್ದು, ಈ ಜೀರಿಗೆ ಕೇವಲ ಒಗ್ಗರಣೆಗೆ ಸೀಮಿತವಾಗದೆ ನಮ್ಮ ಆರೋಗ್ಯಕ್ಕೆ ಇದು ತುಂಬಾ ಪರಿಣಾಮಕಾರಿ ಎಂದು ವೈದ್ಯರು ತಿಳಿಸುತ್ತಾರೆ. ಹೌದು, ಜೀರಿಗೆ ರಸ ಸೇವಿಸುವುದರಿಂದ ನಮ್ಮ ಹೊಟ್ಟೆಯಲಾಗುವಂತಹ ಅಲರ್ಜಿ, ಕಿರಿಕಿರಿ, ಹೊಟ್ಟೆ ಉಬ್ಬರ ಇನ್ನಿತರ ತೊಂದರೆಗಳನ್ನು ನಿವಾರಿಸಿಕೊಳ್ಳಬಹುದು.

ಸರಿಯಾಗಿ ಜೀರ್ಣಕ್ರಿಯೆಯಾಗಲು ಜೀರಿಗೆ ಸಹಾಯ ಮಾಡುತ್ತದೆ ಎಂದು ಹಲವಾರು ಅಧ್ಯಯನಗಳು ಸಾಬೀತುಪಡಿಸಿವೆ. ಜೀರಿಗೆಗಳಲ್ಲಿರುವ ಥೈಮೋಲ್ ಸಂಯುಕ್ತ ಮತ್ತು ಇತರ ಪ್ರಮುಖ ತೈಲಗಳು ಲಾಲಾರಸ ಗ್ರಂಥಿಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಹೀಗಾಗಿ ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಮಲಬದ್ಧತೆ ನಿವಾರಣೆಗೆ: ಜೀರಿಗೆಯಲ್ಲಿ ಹೆಚ್ಚಿನ ನಾರಿನಂಶವಿರುತ್ತದೆ, ಇದು ಜಠರಗರುಳಿನ ಚಟುವಟಿಕೆ ಹೆಚ್ಚಿಸಿ, ಕಿಣ್ವ ಸ್ರವಿಸುವಿಕೆಯನ್ನು ಉತ್ತೇಜಿಸುತ್ತದೆ. ಅದಕ್ಕಾಗಿಯೇ ಜೀರಿಗೆ ಬೀಜಗಳನ್ನು ನೈಸರ್ಗಿಕ ವಿರೇಚಕವಾಗಿ ಬಳಸಲಾಗುತ್ತದೆ.

ಶೀತ ಮತ್ತು ಕೆಮ್ಮನ್ನು ತೊಲಗಿಸುತ್ತದೆ: ಜೀರಿಗೆ ಬ್ಯಾಕ್ಟೀರಿಯಾ ವಿರೋಧಿ. ಆದ್ದರಿಂದ ಇದು ಶೀತ ಮತ್ತು ಕೆಮ್ಮುಗೆ ಅದ್ಭುತವಾದ ಮನೆಮದ್ದು.

ಗರ್ಭಿಣಿ ಮಹಿಳೆಯರಿಗೆ: ಗರ್ಭಿಣಿ ಮಹಿಳೆಯರಲ್ಲಿ ಉಂಟಾಗುವ ಮಲಬದ್ಧತೆ ನಿವಾರಿಸಲು ಮತ್ತು ಜೀರ್ಣಕ್ರಿಯೆ ಸುಧಾರಿಸಲು ಜೀರಿಗೆ ಸಹಾಯ ಮಾಡುತ್ತದೆ. ವಾಕರಿಕೆಯಂತಹ ಗರ್ಭಧಾರಣೆಯ ರೋಗಲಕ್ಷಣಗಳನ್ನು ಎದುರಿಸಲು ಜೀರಿಗೆ ಸಹಾಯ ಮಾಡುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸುತ್ತದೆ: ಜೀರಿಗೆಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಎ ಮತ್ತು ಸಿ ಇವೆ. ಇವು ಪ್ರಬಲ ಆಂಟಿ ಆಕ್ಸಿಡೆಂಟು ಗಳಾಗಿದ್ದು ದೇಹಕ್ಕೆ ಮಾರಕವಾಗಿರುವ ವಿಷಕಾರಿ ವಸ್ತುಗಳು ಮತ್ತು ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಕಣಗಳಿಂದ ರಕ್ಷಣೆ ಒದಗಿಸುತ್ತವೆ. ಅಲ್ಲದೇ ಜೀರಿಗೆಯಲ್ಲಿ ಅತಿಸೂಕ್ಷಕ್ರಿಮಿ ನಿವಾರಕ ಗುಣಗಳೂ ಇದ್ದು ಸೋಂಕು ಹರಡುವ ಸೂಕ್ಷ್ಮಕ್ರಿಮಿಗಳಿಂದ ರಕ್ಷಣೆ ಒದಗಿಸುತ್ತದೆ. ಜೀರಿಗೆಯನ್ನು ಜೀರ್ಣಿಸಿಕೊಂಡ ಬಳಿಕ ಜೀರ್ಣಾಂಗಗಳಲ್ಲಿ ಮೆಗಲೋಮೈಸಿನ್ ಎಂಬ ಪೋಷಕಾಂಶ ಬಿಡುಗಡೆಯಾಗುತ್ತದೆ.

ನಿದ್ರಾಹೀನತೆ ಎದುರಿಸಲು: ಚೆನ್ನಾಗಿ ನಿದ್ರೆ ಬರದಿದ್ದರೆ ಜೀರಿಗೆ ಸೇವಿಸುವುದು ಸಾಮಾನ್ಯ. ಜೀರಿಗೆಯಲ್ಲಿ ಮೆಲಟೋನಿನ್ ಎಂಬ ಸಂಯುಕ್ತವಿರುತ್ತದೆ. ಇದನ್ನು ಹಿಸುಕಿದ ಬಾಳೆಹಣ್ಣಿನೊಂದಿಗೆ ಸೇವಿಸಿದಾಗ ನಿದ್ರೆಯನ್ನು ಪ್ರೇರೇಪಿಸುವ ರಾಸಾಯನಿಕಗಳ ಉತ್ಪಾದನೆ ಹೆಚ್ಚಿಸುತ್ತದೆ.

ತ್ವಚೆ ಹೊಳೆಯಲು: ಜೇನುತುಪ್ಪ ಮತ್ತು ಜೀರಿಗೆ ಫೇಸ್ ಪ್ಯಾಕ್ ನಿಮ್ಮ ತ್ವಚೆಯನ್ನು ಹೊಳೆಯುವಂತೆ ಮಾಡುವುದಲ್ಲದೆ, ಮೃದುಗೊಳಿಸುತ್ತದೆ. ಜೇನುತುಪ್ಪವು ಚರ್ಮವು ಹೆಚ್ಚು ಒಣಗದಂತೆ ತಡೆಯುತ್ತದೆ.

 

Related