ಕ್ರಿಕೆಟ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲವೇಲಿ ಅದು ಒಂದು ಆಟವಲ್ಲ, ಅದು ನಮಗೆ ಎಮೋಷನ್ ಆಗಿದೆ. ಅದರಲ್ಲೂ ಸಹ ಈ ಚಿಕ್ಕ ಬಾಲಕನ ಸಾಧನೆ ಕಂಡು ಎಲ್ಲರೂ ಗಾಬರಿಯಾಗಿದ್ದಾರೆ ಹಾಗೂ ಅವನ ಸಾಧನೆಯನ್ನು ಕೊಂಡಾಡುತ್ತಿದ್ದಾರೆ.
ಒಂದೇ ಓವರಲ್ಲಿ ಡಬಲ್ ಹ್ಯಾಟ್ರಿಕ್(6 ವಿಕೆಟ್) ಕಬಳಿಸುವ ಮೂಲಕ ಇಂಗ್ಲೆಂಡ್ನ 12 ವರ್ಷದ ಬಾಲಕ ಅಪರೂಪದ ದಾಖಲೆ ಮಾಡಿದ್ದಾನೆ. ವೋರ್ಸೆಸ್ಟರ್ಶೈರ್ ಕೌಂಟಿ ಬೋರ್ಡ್ ಟೂರ್ನಿಯಲ್ಲಿ ಬ್ರೊಮ್ಸ್ಗ್ರೋವ್ ತಂಡದ ಪರ ಆಡುತ್ತಿರುವ ಆಲಿವರ್ ವೈಟ್ಹೌಸ್ ಇತ್ತೀಚೆಗೆ ಕುಕ್ಹಿಲ್ ತಂಡದ ಈ ವಿರುದ್ಧ ಈ ಸಾಧನೆ ಮಾಡಿದ್ದಾನೆ.
ಮೊದಲ ಮೂರು ವಿಕೆಟ್ ಕಬಳಿಸಿದ ಬಳಿಕ ಪ್ರೇಕ್ಷಕರು ಹ್ಯಾಟ್ರಿಕ್ ಎಂದು ಜೋರಾಗಿ ಚಪ್ಪಾಳೆ ತಟ್ಟಿದ್ದು ಖುಷಿ ಕೊಟ್ಟಿತು. ಒಂದೇ ಓವರ್ನ ಆರು ಎಸೆತಗಳಲ್ಲಿ ಆರು ವಿಕೆಟ್ ಕಬಳಿಸಿದ್ದು ನನಗೇ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಆಲಿವರ್ ವೈಟ್ಹೌಸ್ ಹೇಳಿದ್ದಾನೆ. ಇನ್ನು ಆಲಿವರ್ ವೈಟ್ಹೌಸ್ ಅವರ ತಂಡದ ಮೊದಲ ನಾಯಕ ಜೇಡನ್ ಲಿವಿಟ್, “ಆತ ಮಾಡಿದ ಸಾಧನೆಯನ್ನು ನಂಬಲು ಸಾಧ್ಯವಾಗುತ್ತಿಲ್ಲ. ಆತನ ಸಾಧನೆ ಸಾಕಷ್ಟು ಮಹತ್ವವಾದದ್ದು ಎಂದು ಹೇಳಿದ್ದಾರೆ.