ನಕಲಿ ದಾಖಲೆ ಸೃಷ್ಟಿಸಿ ಹಣ ಗುಳಂ

ನಕಲಿ ದಾಖಲೆ ಸೃಷ್ಟಿಸಿ ಹಣ ಗುಳಂ

ಕೋಲಾರ : ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಅಧ್ಯಕ್ಷ್ಯ ಬ್ಯಾಲಹಳ್ಳಿ ಗೋವಿಂದಗೌಡ ಬ್ಯಾಂಕಿನ ಮೇಲ್ವಿಚಾರಕರ ತುರ್ತು ಸಭೆ ಕರೆದಿದ್ದರು. ಸಭೆಯಲ್ಲಿ ಬ್ಯಾಂಕಿನ ಎಮ್‌ಡಿ, ಮ್ಯಾನೇಜರ್‌ಗಳು ಹಾಗೂ ವಿವಿಧ ಅಧಿಕಾರಿಗಳು ಇದರು. ಇಲ್ಲಿ ಬ್ಯಾಂಕ್ ಸಂಬAಧಿತ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯ್ತು.

ಇತ್ತೀಚೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಾಲ ಮಂಜೂರು ಮಾಡಿ ಹಣ ಗುಳಂ ಮಾಡಲಾಗಿದೆ ಎಂದು ಡಿಸಿಸಿ ಬ್ಯಾಂಕ್ ವಿರುದ್ದ ಗಂಭೀರ ಆರೋಪ ಕೇಳಿಬಂದಿತ್ತು. ಇದರ ವಿರುದ್ಧ ತನಿಖೆಗೆ ಆಗ್ರಹಿಸಿ ಸಚಿವ ಎಸ್.ಟಿ ಸೋಮಶೇಖರ್‌ಗೆ ಡಿಸಿಸಿ ಬ್ಯಾಂಕ್ ಹಾಲಿ ಮತ್ತು ಮಾಜಿ ನಿರ್ದೇಶಕರು ದೂರು ನೀಡಿದ್ದರು.

ಡಿಸಿಸಿ ಬ್ಯಾಂಕ್ ಹಾಲಿ ಮತ್ತು ಮಾಜಿ ನಿರ್ದೇಶಕರ ದೂರಿನ ಆಧಾರದ ಮೇಲೆ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ತನಿಖೆ ನಡೆಸುವ ಮಾತನ್ನು ಇತ್ತೀಚೆಗೆ ಕೋಲಾರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಆಡಿದ್ದರು. ಈ ಹಿನ್ನಲೆಯಲ್ಲಿ ಅಧ್ಯಕ್ಷ್ಯ ಗೋವಿಂದಗೌಡ ಕರೆದ ತುರ್ತು ಸಭೆ ಮಹತ್ವ ಪಡೆದುಕೊಂಡಿತ್ತು.

ಸಭೆಯಲ್ಲಿ ಅಧಿಕಾರಿಗಳಿಗೆ ಸ್ಪಷ್ಟವಾಗಿ ಕಿವಿಮಾತು ಹೇಳಿದ ಅಧ್ಯಕ್ಷ್ಯ ಗೋವಿಂದಗೌಡ, ಯಾವುದೇ ಸಂದರ್ಭ ಬಂದರೂ ಎಲ್ಲಾ ದಾಖಲೆಯನ್ನು ನೀಡಲು ಸಿದ್ದರಾಗಿರಿ. ಬ್ಯಾಂಕಿನಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ದಾಖಲೆ ಪರಿಶೀಲನೆ ಮಾಡಿ ಸಾಲ ಮಂಜೂರು ಮಾಡಿದ್ದೇವೆ. ತಪ್ಪು ಮಾಡದೆ ಇದ್ದಾಗ ಯಾರಿಗೂ ಹೆದರುವ ಅವಶ್ಯಕತೆಯಿಲ್ಲ ಎಂದು ಅಧಿಕಾರಿಗಳಿಗೆ ಹೇಳಿದರು.

ಬ್ಯಾಂಕ್ ವಿರುದ್ದದ ಆರೋಪವೇನು?

ಡಿಸಿಸಿ ಬ್ಯಾಂಕ್‌ನಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಹಲವೆಡೆ ಗೋಮಾಳ ಜಮೀನಿಗೆ ಕೆಲವರು ನಕಲಿ ದಾಖಲೆಗಳನ್ನು ನೀಡಿ ಸಾಲ ಪಡೆದುಕೊಂಡಿದ್ದಾರೆ. ಇದಕ್ಕೆ ಬ್ಯಾಂಕ್ ಅಧಿಕಾರಿಗಳು ಕುಮ್ಮಕ್ಕು ನೀಡಿದ್ದಾರೆ ಎಂಬುದು ನಿರ್ದೇಶಕರ ಆರೋಪವಾಗಿದೆ. ಹೀಗಾಗಿ ಸಭೆಯಲ್ಲಿ ಕೆಲವು ಅಧಿಕಾರಿಗಳನ್ನ ಎಚ್ಚರಿಸಿ ಎಲ್ಲಾ ದಾಖಲೆಯನ್ನು ಸಿದ್ದಪಡಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಆದರೆ, ತನಿಖೆ ನಡೆಸುವ ಹೇಳಿಕೆ ನೀಡಿರುವ ಸಹಕಾರ ಸಚಿವರು ಯಾವ ಆಯಾಮದಲ್ಲಿ ವಿಚಾರಣೆ ಆರಂಭಿಸಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ

Related