ಸ್ಕೂಲ್ ಫೀ ಜೊತೆ ಕೋವಿಡ್ ಶುಲ್ಕ್ ಕಟ್ಬೇಕು

ಸ್ಕೂಲ್ ಫೀ ಜೊತೆ ಕೋವಿಡ್ ಶುಲ್ಕ್ ಕಟ್ಬೇಕು

ಬೆಂಗಳೂರು : ಖಾಸಗಿ ಹೈಸ್ಕೂಲ್ ವಿದ್ಯಾರ್ಥಿಗಳು ತಮಗೆ ಏನಾದರೂ ಪಠ್ಯದ ಬಗ್ಗೆ ಅನುಮಾನವಿದ್ದರೆ ಅದನ್ನು ಬಗೆಹರಿಸಿಕೊಳ್ಳಲು ಶಾಲೆಗಳಿಗೆ ತೆರಳಬಹುದಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕೊರೊನಾದಿಂದಾಗಿ ನಿತ್ಯ ಶಾಲೆಯ ಸುತ್ತಮುತ್ತಲೂ ಸ್ಯಾನಿಟೈಜ್ ಮಾಡುವುದರಿಂದ ನಿರ್ವಹಣೆ ಶುಲ್ಕವನ್ನು ಹೆಚ್ಚಳ ಮಾಡಲು ಶಾಲೆಗಳು ನಿರ್ಧರಿಸಿವೆ. ಕೆಲವು ಶಾಲೆಗಳು ಕೋವಿಡ್ ಶುಲ್ಕ ಎನ್ನುವ ಹೆಸರಿನಲ್ಲಿ ಶುಲ್ಕವನ್ನು ಪಡೆಯಲು ಮುಂದಾಗಿವೆ. ಶಾಲೆಗಳು ಪುನರಾರಂಭಗೊಳ್ಳಲಿದ್ದು, ಬೆಳಗ್ಗೆ 9 ರಿಂದ ಮಧ್ಯಾಹ್ನ 12ರವರೆಗೆ ತರಗತಿಗಳು ನಡೆಯಲಿವೆ. ಸೆ.21ರ ಬಳಿಕ ಶಿಕ್ಷಕರಿಂದ ಗೈಡೆನ್ಸ್ ಪಡೆದುಕೊಳ್ಳಬಹುದಾಗಿದೆ.

ಪಠ್ಯ ಸಲಕರಣೆಗಳು, ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳು ಪ್ರಿಂಟರ್‌ಗಳನ್ನು ಶೇ.70ರಷ್ಟು ಆಲ್ಕೋಹಾಲ್ ಹೊಂದಿರುವ ವೈಪ್‌ಗಳಿಂದ ಶುಚಿಗೊಳಿಸಬೇಕು.

ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್ ಆಫ್ ಪ್ರೈಮರಿ ಆಂಡ್ ಸೆಕೆಂಡರಿ ಸ್ಕೂಲ್ ಜೆನರಲ್ ಸೆಕ್ರೆಟರಿ ಡಾ. ಶಶಿಕುಮಾರ್ ಮಾತನಾಡಿ, ನಮ್ಮ ಶಾಲೆಯ ವೆಚ್ಚಗಳೂ ಹೆಚ್ಚಾಗುತ್ತಿವೆ. ಹೀಗಾಗಿ ಶೇ.5ರಷ್ಟು ಹೌಸ್‌ಕೀಪಿಂಗ್ ಶುಲ್ಕವನ್ನು ಹೆಚ್ಚಿಸಲು ಮುಂದಾಗಿದ್ದೇವೆ. ಪೋಷಕರು ನಮ್ಮ ಕಷ್ಟವನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ಭಾವಿಸಿದ್ದೇನೆ ಎಂದರು.

Related