ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಆಗ್ರಹ

ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಆಗ್ರಹ

ಜೇವರ್ಗಿ : ಕಲಬುರಗಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಶಾಸಕ ದೊಡ್ಡಪ್ಪಗೌಡ ಎಸ್. ಪಾಟೀಲ ನರಿಬೋಳ ಅವರು, ಬಿಜೆಪಿ ಪಕ್ಷದಲ್ಲಿ ನಿಷ್ಠೆಯಿಂದ ದುಡಿಯುತ್ತ ಬಂದಿದ್ದು ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕೆಂದು ಬಿಜೆಪಿ ಯುವ ಮುಖಂಡರಾದ ಸಾಹೇಬಗೌಡ ತೊನಸಳ್ಳಿ ಬುಟ್ನಾಳ ಆಗ್ರಹಿಸಿದ್ದಾರೆ.

ಪಟ್ಟಣದಲ್ಲಿ ಪತ್ರಿಕಾ ಪ್ರಕಟಣೆ ಹೋರಡಿಸಿ ಮಾತನಾಡಿದ ಅವರು, ಸುಮಾರು 40-45ವರ್ಷಗಳಿಂದ ದಿ. ಶಿವಲಿಂಗಪ್ಪ ಗೌಡರಿಂದ ಹಿಡಿದು, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಹಾಗೂ ಅವರ ಮನೇತನದವರು ಬಿಜೆಪಿ ಪಕ್ಷದಲ್ಲಿ ಪ್ರಾಮಾಣಿಕ, ಕಾರ್ಯ, ನಿಷ್ಠೆಯಿಂದ ದುಡಿಯುತ್ತ ಬಂದಿದ್ದು, ಅವರು ಶಾಸಕರಿದ್ದ ಸಮಯದಲ್ಲಿ ತಾಲೂಕಿನಲ್ಲಿ ಪ್ರತಿಯೊಂದು ಹಳ್ಳಿಯ ಕಡು ಬಡವರಿಗೆ, ನಿರ್ಗತಿಕರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಅನೇಕ ಅಭಿವೃದ್ಧಿ ಕೆಲಸ ಕಾರ್ಯಗಳು ಮಾಡಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷರಾದ ಸಮಯದಲ್ಲೂ ಪಕ್ಷದ ಉಳಿವಿಗಾಗಿ ಹಗಲು ರಾತ್ರಿ ಹೋರಾಡಿ, ಪಕ್ಷದಿಂದ ಲೋಕಸಭಾ ಸದಸ್ಯರ ಗೆಲುವಿಗೆ ಹಾಗೂ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾಗಲು ತುಂಬಾ ಶ್ರಮಿಸಿದ್ದಾರೆ. ಕಾರಣ ಕೂಡಲೇ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕೆಂದು ಸಾಹೇಬಗೌಡ ತೋನಸಳ್ಳಿ ಬುಟ್ನಾಳ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಪತ್ರಿಕಾ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.

Related