ಭಟ್ಟನಿಗೂ ಕೊರೋನಾ ಸೋಂಕು!

ಭಟ್ಟನಿಗೂ ಕೊರೋನಾ ಸೋಂಕು!

ತುಮಕೂರು : ಗುಬ್ಬಿ ತಾಲೂಕು ಕಿಟ್ಟದಗುಪ್ಪೆಯ ಅಡುಗೆ ಭಟ್ಟರೊಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಗ್ರಾಮವೀಗ ಕಂಟೈನ್ಮೆAಟ್ ವಲಯವಾಗಿ ಮಾರ್ಪಟ್ಟಿದೆ. ಇತ್ತೀಚೆಗೆ ನಡೆದ ಎರಡ್ಮೂರು ಮದುವೆಗಳಲ್ಲಿ ಇವರು ಅಡುಗೆ ಮಾಡಿದ್ದು, ವಧು-ವರರನ್ನೂ ಕ್ವಾರಂಟೈನ್ ಮಾಡಲಾಗಿದೆ.

55 ವರ್ಷದ ಸೋಂಕಿತ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ದೊಡ್ಡದಾಗಿದ್ದು, ಸದ್ಯ ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ 32 ಜನರನ್ನು ಪತ್ತೆ ಹಚ್ಚಲಾಗುತ್ತಿದೆ. ಸೋಂಕಿತ ವ್ಯಕ್ತಿಯು ಜೂ.4ರಂದು ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಮಾತ್ರೆ ತರಲು ಹೋಗಿ ವಾಪಸ್ ಗ್ರಾಮಕ್ಕೆ ಬಂದಿದ್ದರು. ಗುಬ್ಬಿ ಪಟ್ಟಣದ ಬಸವೇಶ್ವರ ಕ್ಲಿನಿಕ್‌ನಲ್ಲಿ ಎರಡು ಬಾರಿ ಚಿಕಿತ್ಸೆ ಪಡೆದು ಪುನಃ ಜೂ.14ರಂದು ಬಸವೇಶ್ವರ ಕ್ಲಿನಿಕ್‌ಗೆ ತೆರಳಿದ ವ್ಯಕ್ತಿಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಗಂಟಲು ದ್ರವ ಸ್ಯಾಂಪಲ್ ಪಡೆದು ಪರೀಕ್ಷೆಗೆ ಕಳುಹಿಸಲಾಗಿತ್ತು.

ವೃತ್ತಿಯಲ್ಲಿ ಅಡುಗೆ ಭಟ್ಟರಾಗಿದ್ದ ಈ ವ್ಯಕ್ತಿಯು ಇತ್ತೀಚೆಗೆ ಅಡಗೂರು, ಪತ್ರೆಮತ್ತಿಘಟ್ಟದಲ್ಲಿ ಮದುವೆಗಳಿಗೆ ಅಡುಗೆ ಮಾಡಿದ್ದರು. ಬುಧವಾರ ಹೇರೂರು ಫಾರಂನಲ್ಲಿ ಒಂದು ಮದುವೆಯಲ್ಲಿ ಅಡುಗೆ ಮಾಡಿದ್ದರು ಎನ್ನಲಾಗಿದ್ದು, ಪ್ರಸ್ತುತ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ವಧು- ವರ ಸೇರಿ 12 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಗುಬ್ಬಿಯಿಂದ ಹೇರೂರು ಮಾರ್ಗವಾಗಿ ಬೆಲವತ್ತ ಕಡಬ ಗ್ರಾಮಕ್ಕೆ ಹಾದುಹೋಗುವ ಸಂಪರ್ಕ ರಸ್ತೆಯನ್ನು ಬಂದ್ ಮಾಡಲಾಗಿದೆ.

Related