ಕೊರೊನಾಗೆ ಪತಂಜಲಿ ಮದ್ದು

ಕೊರೊನಾಗೆ ಪತಂಜಲಿ ಮದ್ದು

ನವದೆಹಲಿ, ಮಾ. 19 : ಕೊರೊನಾ ವೈರಸ್ ರೋಗಕ್ಕೆ ಔಷಧಿ ಕಂಡುಹಿಡಿಯಲು ವಿಶ್ವಾದ್ಯಂತ ವಿಜ್ಞಾನಿಗಳು ಹರಸಾಹಸ ಪಡುತ್ತಿದ್ದು, ಕೊರೊನಾ ನಿವಾರಿಸಲು ಪತಂಜಲಿ ಸಂಸ್ಥೆಯ ಬಳಿ ಔಷಧಿ ಇದೆ ಎಂದು ಮಾತನಾಡಿ ಖ್ಯಾತ ಯೋಗ ಗುರು ಬಾಬಾ ರಾಮ್ದೇವ್ ವೈದ್ಯರ ಸಿಟ್ಟಿಗೆ ಕಾರಣವಾಗಿದ್ದಾರೆ.
ವಿಶ್ವಾದ್ಯಂತ ತನ್ನ ಕರಿನೆರಳು ಬೀರಿ ರಣಕೇಕೆ ಹಾಕುತ್ತಿರುವ ಕಿಲ್ಲರ್ ಕೊರೊನಾ ವೈರಸ್ಗೆ 8 ಸಾವಿರಕ್ಕೂ ಅಧಿಕ ಮಂದಿಯನ್ನು ಬಲಿಯಾಗಿದ್ದಾರೆ. ಆದರೆ ಕಳೆದ ಹಲವು ತಿಂಗಳಿಂದ ಜಗತ್ತಿನ ಸುಮಾರು 173ಕ್ಕೂ ಅಧಿಕ ರಾಷ್ಟ್ರಗಳು, ಪ್ರಾಂತ್ಯಕ್ಕೆ ಕೊರೊನಾ ತಲೆನೋವಾಗಿದೆ. ಕೊರೊನಾ ವೈರಸ್ ರೋಗಕ್ಕೆ ಔಷಧಿ ಕಂಡುಹಿಡಿಯಲು ವಿಶ್ವಾದ್ಯಂತ ವಿಜ್ಞಾನಿಗಳು ಹರಸಾಹಸ ಪಡುತ್ತಿದ್ದು, ಸೂಕ್ತ ಔಷಧಿಗಾಗಿ ವೈದ್ಯರು ಪರದಾಡುತ್ತಿದ್ದಾರೆ. ಈ ಮಧ್ಯೆ ಯೋಗ ಗುರು ಬಾಬಾ ರಾಮದೇವ್ ಅವರು ಕೊರೊನಾ ರೋಗಕ್ಕೆ ಆಯುರ್ವೇದದಲ್ಲಿ ಮದ್ದಿದೆ ಎಂದು ಹೇಳಿದ ಮಾತು ಭಾರಿ ಚರ್ಚೆಗೆ ಕಾರಣವಾಗಿದೆ.ಪತಂಜಲಿ ಸಂಸ್ಥೆಯ ಅಶ್ವಗಂಧ ಉತ್ಪನ್ನದ ಜಾಹಿರಾತಿನಲ್ಲಿ ಮಾತನಾಡಿರುವ ಬಾಬಾ, ಕೊರೊನಾ ವೈರಸ್ ಸೇರಿದಂತೆ ವಿವಿಧ ಮಾರಣಾಂತಿಕ ವೈರಸ್ಗಳಿಗೆ ಆಯುರ್ವೇದದಲ್ಲಿ ಔಷಧವಿದೆ ಎಂದಿದ್ದಾರೆ.

Related