ಕೊರೋನಾ ಮೂರು ಗ್ರಾಮ ಸೀಲ್‌ಡೌನ್

ಕೊರೋನಾ ಮೂರು ಗ್ರಾಮ ಸೀಲ್‌ಡೌನ್

ಬಂಗಾರಪೇಟೆ  : ತಾಲ್ಲೂಕಿನ ಕುಪ್ಪನಹಳ್ಳಿ ಮತ್ತು ಬನಹಳ್ಳಿ ಗ್ರಾಮದಲ್ಲಿರುವ ಇಬ್ಬರಿಗೆ ಕೊರೋನಾ ಪಾಸಿಟಿವ್ ದೃಢ ಪಟ್ಟಿದೆ. ಬನಹಳ್ಳಿಯಲ್ಲಿ ಹತ್ತು ಮಂದಿಗೆ ಹೋಂ ಕ್ವಾರಂಟೈನ್ ಮಾಡಲಾಗಿದೆ. ಇತ್ತೀಚೆಗೆ ಕುಪ್ಪನಹಳ್ಳಿ ಗ್ರಾಮದಲ್ಲಿ ಕಾರ್ ಚಾಲಕನಿಗೆ ಪಾಸಿಟಿವ್ ದೃಢಪಟ್ಟಿದ್ದರಿಂದ ಆತನ ಸಂಪರ್ಕದಲ್ಲಿದ್ದ ಮಹಿಳೆಗೆ ಹೋಂ ಕ್ವಾರಂಟೈನ್ ಮಾಡಲಾಗಿತ್ತು.

ಇಬ್ಬರನ್ನು ಐಸೋಲೇಷನ್ ವಾರ್ಡ್ಗೆ ಶಿಫ್ಟ್ ಮಾಡಲಾಗಿತ್ತು. 65 ವರ್ಷದ ಮಹಿಳೆಗೆ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಸೋಂಕಿತನ ಮನೆಯಿಂದ ನೂರು ಮೀಟರ್ ವ್ಯಾಪ್ತಿ ಸೀಲ್‌ಡೌನ್ ಮಾಡಲಾಗಿದೆ. ಮತ್ತಿಬ್ಬರ ವರದಿ ಬರಬೇಕಾಗಿದೆ.

ಮಹಿಳೆಯನ್ನು ಕೋವಿಡ್ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಕುಪ್ಪನಹಳ್ಳಿ ಗ್ರಾಮದ ಮಹಿಳೆಗೆ ಪಾಸಿಟಿವ್ ಮಾಹಿತಿ ಬಂದ ತಕ್ಷಣ ಅಧಿಕಾರಿಗಳು ಗ್ರಾಮಕ್ಕೆ ಬೇಟಿ ನೀಡಿ ಕೊರೊನಾ ವಿರುದ್ದ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಂಡಿದ್ದಾರೆ. ಪಂಚಾಯತ್ ಅಭಿವೃದ್ದಿ ಅಧಿಕಾರಿ ಶಂಕAರ್ ನೇತೃತ್ವದಲ್ಲಿ ಸಿಬ್ಬಂದಿ ಗ್ರಾಮದಲ್ಲಿ ಮೊಕ್ಕಾಂ ಹೂಡಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವ ಮೂಲಕ ಆತಂಕವನ್ನು ದೂರ ಮಾಡುತ್ತಿದ್ದಾರೆ.

ಬನಹಳ್ಳಿ ಗ್ರಾಮದಲ್ಲಿ 23 ವರ್ಷದ ಮಹಿಳೆಗೆ ಪಾಸಿಟಿವ್ ಕಾಣಿಸಿಕೊಂಡಿರುವುದರಿAದ ಸದರಿ ಸೋಂಕಿತ ಮನೆಯಿಂದ ನೂರು ಮೀಟರ್ ಸೀಲ್ ಡೌನ್ ಮಾಡಲಾಗಿದೆ. ಸೋಂಕಿತರ ಸಂಪರ್ಕದಲ್ಲಿದ್ದ 10 ಮಂದಿ ಸಂಬಧಿಕರಿಗೆ ಹೋಂ ಕ್ವಾರಂಟೈನ್ ಮಾಡಲಾಗಿದೆ.ವೃದ್ದರು, ಮಕ್ಕಳು ಈ ಹತ್ತು ಮಂದಿಯಲ್ಲಿದ್ದಾರೆ. ಗ್ರಾಮದಲ್ಲಿ ಆತಂಕಕ್ಕೆ ಕಾರಣವಾಗುತ್ತಿದೆ.

ಸೋಂಕಿತ ಮಹಿಳೆಯ ಹಿನ್ನೆಲೆ ಗಮನಿಸಿದಾಗ ತಮಿಳುನಾಡಿನ ಕುಂಬಳದಲ್ಲಿ ವಿವಾಹವಾಗಿದ್ದಾರೆ. ಅನಾರೋಗ್ಯದ ಹಿನ್ನಲೆಯಲ್ಲಿ ಹುಟ್ಟೂರಾದ ಬನಹಳ್ಳಿಯ ವಿಳಾಸ ನೀಡಿ ಬೂದಿಕೋಟೆ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ಬರುತ್ತಿದ್ದು. ಕಳೆದ ಸೋಮವಾರ ಚಿಕಿತ್ಸೆಗೆ ಆಗಮಿಸಿದಾಗ ಆರೋಗ್ಯ ಇಲಾಖೆ ಆಕೆಯ ಸ್ವಾಬ್‌ನ್ನು ಪಡೆದುಕೊಂಡು ಲ್ಯಾಬ್ ಕಳುಹಿಸಿದ್ದರು. ಶುಕ್ರವಾರರಾತ್ರಿ ಪಾಸಿಟಿವ್ ದೃಢಪಟ್ಟಿದೆ.

Related