ಕರೋನಾ ಶಂಕಿತ ಆಸ್ಪತ್ರೆಗೆ ದಾಖಲು..!?

  • In State
  • March 13, 2020
  • 482 Views
ಕರೋನಾ ಶಂಕಿತ ಆಸ್ಪತ್ರೆಗೆ ದಾಖಲು..!?

ಚಿಕ್ಕಮಗಳೂರು, ಮಾ.13: ಕೋವಿಡ್ ಹಿನ್ನೆಲೆ ವ್ಯಕ್ತಿಯೋರ್ವ ಆಸ್ಪತ್ರೆಗೆ ದಾಖಲಾಗಿದ್ದು, ಮಲ್ಲೇಗೌಡ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 15ದಿನಗಳ ಹಿಂದೆ ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ 45 ವರ್ಷದ ವ್ಯಕ್ತಿ, ತನ್ನ ತಂಗಿ ಮನೆ ಮೂಡಿಗೆರೆಗೆ ಆಗಮಿಸಿದ್ದರು ಎನ್ನಲಾಗಿದೆ. ತೀವ್ರ ಜ್ವರ, ಕೆಮ್ಮು, ಶೀತ ಹಿನ್ನೆಲೆ ಆಸ್ಪತ್ರೆಗೆ ದಾಖಲಾದರು. ಎರಡು ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ಕೂಡ ತೋರಿಸಿದ್ದಾರೆ. ಜ್ವರ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ನಿನ್ನೆ ರಾತ್ರಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

Related