ಕೊರೊನಾ ನಿಯಂತ್ರಣಕ್ಕೆ ಮನೆ ಮದ್ದೇ ಸೂಕ್ತ: ಶಾಸಕ ಸಿದ್ದು ಸವದಿ

ಕೊರೊನಾ ನಿಯಂತ್ರಣಕ್ಕೆ ಮನೆ ಮದ್ದೇ ಸೂಕ್ತ: ಶಾಸಕ ಸಿದ್ದು ಸವದಿ

ರಬಕವಿ-ಬನಹಟ್ಟಿ: ಕೊರೊನಾ ವೈರಸ್‍ನಿಂದ ಜಗತ್ತಿನ ಎಲ್ಲ ರಾಷ್ಟ್ರಗಳು ತತ್ತರಿಸುತ್ತಿವೆ. ಈ ವೈರಸ್ ಹರಡುವಿಕೆಯನ್ನು ನಿಯಂತ್ರಿಸಲಾರದೆ ಪರಿತಪಿಸುತ್ತಿವೆ. ಸಾರ್ವಜನಿಕರು ವಿಷಮ ಪರಿಸ್ಥಿತಿಯಲ್ಲಿ ತಮ್ಮ ಆರೋಗ್ಯದ ದೃಷ್ಠಿಯಿಂದ ಆಯುರ್ವೇದ, ಯೋಗದಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಅದಕ್ಕಾಗಿ ಆಯುರ್ವೇದದ ಮನೆ ಮದ್ದುಗಳನ್ನು ಬಳಸಿರಿ ಎಂದು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು.

ಬಾಗಲಕೋಟೆ ಜಿಲ್ಲಾ ಆಯುಷ್ ಇಲಾಖೆ, ತಾಲೂಕಾ ಆಡಳಿತ ಇವರ ಸಹಯೋಗದಲ್ಲಿ ನಡೆದ ಕೊರೊನಾ ಜನ ಜಾಗೃತಾ ಜಾಥಾವನ್ನು ಉದ್ಘಾಟಿಸಿ ಶಾಸಕ ಸಿದ್ದು ಸವದಿ ಮಾತನಾಡಿದರು.

ರಬಕವಿ-ಬನಹಟ್ಟಿ ತಹಶೀಲ್ದಾರ ಪ್ರಶಾಂತ ಚನಗೊಂಡ, ಬನಹಟ್ಟಿ ಕರುಣೇಶಗೌಡ ಜಿ, ನಗರಸಭೆಯ ಪೌರಾಯುಕ್ತ ಶ್ರೀನಿವಾಸ ಜಾಧವ, ಉಪ ತಹಶೀಲ್ದಾರ ಸದಾಶಿವ ಕಾಂಬಳೆ, ಡಾ|| ಆನಂದ ಕುಮಟಳ್ಳಿ ಭಾಗವಹಿಸಿದ್ದರು.

ಆಯುರ್ವೇದ ಚಿಕಿತ್ಸಾಲಯದ ಡಾ|| ರವಿ ಮೈತ್ರಿ ಆಯುರ್ವೇದದ ಮನೆ ಮದ್ದುಗಳನ್ನು ತಯಾರಿಸುವ ವಿಧಾನಗಳನ್ನು ಹೇಳಿಕೊಟ್ಟರು. ನಂತರ ಕೋರೊನಾ ಜನ ಜಾಗೃತಾ ಜಾಥಾ ನಗರದಲ್ಲಿ ನಡೆಯಿತು. ಗ್ರಾಮ ಲೆಕ್ಕಾಧಿಕಾರಿ ಎಸ್.ಜಿ.ಖವಟಕೊಪ್ಪ, ತೇರದಾಳ ಕಂದಾಯ ನೀರಿಕ್ಷಕ ಬಸವರಾಜ ತಾಳಿಕೋಟಿ ಜಾಥಾದಲ್ಲಿದ್ದರು.

Related