ಕೊರೊನಾ  ಭೀತಿ: ಖಾಸಗಿ ವೈದ್ಯರು ಪೊಲೀಸ್ ಅಧಿಕಾರಿಗಳಿಗೆ ಊಟದ ವ್ಯವಸ್ಥೆ

  • In State
  • March 28, 2020
  • 272 Views
ಕೊರೊನಾ  ಭೀತಿ: ಖಾಸಗಿ ವೈದ್ಯರು ಪೊಲೀಸ್ ಅಧಿಕಾರಿಗಳಿಗೆ ಊಟದ ವ್ಯವಸ್ಥೆ

ಮೂಡಲಗಿ, ಮಾ. 28: ಇತ್ತೀಚೆಗೆ  ಮಹಾಮಾರಿ ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ತಗೆದುಕೊಂಡು ಕ್ರಮಗಳಿಗೆ ನಗರ ಪ್ರದೇಶ, ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ  ಪೋಲೀಸ, ಪುರಸಭೆ, ತಹಸೀಲ್ದಾರ್,  ಎಲ್ಲ ಸಿಬ್ಬಂದಿ ಹಗಲಿರುಳು ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವುದು ನಮಗೆಲ್ಲ ತಿಳಿದಿರುವ ವಿಷಯವಿದೆ.

ಆದರೆ, ಇಡೀ ದೇಶವೇ ಲಾಕ್ ಡೌನ್ ಇರುವಾಗ ರಾಜ್ಯ ಸರಕಾರವು ಕೂಡ ಅಧಿಕಾರಿಗಳಿಗೆ ಊಟದ ವ್ಯವಸ್ಥೆ ಮಾಡಿಲ್ಲ. ಹೀಗಿರುವಾಗ ಅಧಿಕಾರಿಗಳು ಏನೂ ಮಾಡಬೇಕು. ಅಧಿಕಾರಿಗಳು ಕೆಲಸ ಬಿಟ್ಟು ಮನೆಗೂ ಹೋಗುವ ಹಾಗಿಲ್ಲ. ಇಂತಹ ಸಮಯದಲ್ಲಿ ಇಂದು ಸ್ಥಳೀಯ ಖಾಸಗಿ ವೈದ್ಯರು ಸೇರಿ ಅಧಿಕಾರಿಗಳಿಗೆ ಊಟದ ವ್ಯವಸ್ಥೆ ಮಾಡಿ ರಾಜ್ಯ ಸರ್ಕಾರ ನಾಚುವಂತೆ ಮಾಡಿದ್ದಾರೆ.

ಹೌದು, ಸರ್ಕಾರ ಅಂದಮೇಲೆ ಜನರ ರಕ್ಷಣೆಗೆ ಅಷ್ಟೇ ಸೀಮಿತವಲ್ಲ. ಜನರನ್ನು ರಕ್ಷಿಸುವ ಅಧಿಕಾರಿಗಳಿಗೂ  ಕೂಡ ಊಟದ ವ್ಯವಸ್ಥೆ ಮಾಡಬೇಕು. ಯಾಕೆ ಅಂದ್ರೆ ಸರ್ಕಾರದ ಆದೇಶದಂತೆ ಎಲ್ಲಾ ಅಂಗಡಿ ಮುಗ್ಗಟ್ಟುಗಳು ಬಂದಿರುವಾಗ ಅಧಿಕಾರಿಗಳು ಎಲ್ಲಿ ಊಟ ಮಾಡಬೇಕು ಎಂಬುವುದು ಸರ್ಕಾರ ಅರ್ಥಮಾಡಿಕೊಳ್ಳಬೇಕು.

ಜನರು ಮಾನವೀಯತೆಗೋಸ್ಕರ ಅಧಿಕಾರಿಗಳಿಗೆ ಊಟ, ತಂಪು ಪಾನಿಗಳಂತಹ ಸೇವಗಳನ್ನು ಮಾಡುತ್ತಿರುವಾಗ  ಸರ್ಕಾರ ಏಕೆ ಮಾಡುತ್ತಿಲ್ಲ ಎಂಬುದೇ ಯಕ್ಷ ಪ್ರಶ್ನೆಯಾಗಿ ಉಳಿದಿದೆ.

ಅಧಿಕಾರಿಗಳಿಗೆ ಊಟದ ವ್ಯವಸ್ಥೆ ಮಾಡಿದ ಡಾ ಪ್ರಕಾಶ್ ಬುದ್ನಿ.ಡಾ  ವೈ ಬಿ ಮುಲ್ವಾಡ್. ಡಾ ಎ ಎನ್ ಪಾಟೀಲ್. ಡಾ ಜ ಎ ಮುಲ್ಲಾ. ಡಾ ಎಸ್ ಎಸ್ ಪಾಟೀಲ್. ಡಾ ಎಮ್ ಎನ್ ಮುಗಳಖೋಡ. ಡಾ ಪಿ ಎಸ್ ಮುರಗೋಡ್. ಲ್ಯಾಬ್  ಟೆಕ್ನಿಷನ  ವರ್ಧಮಾನ ಜರಾಳೆ ಎಲ್ಲ ವೈದ್ಯರಿಗೆ ಪ್ರಜ್ಞಾವಂತರು ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.

 

Related