ವಿಶ್ವ ಆರೋಗ್ಯ ಸಂಸ್ಥೆಯಿಂದ ಕೊರೊನಾ ವೈರಸ್ ಗೆ ಅಧಿಕೃತ ಹೆಸರು

ವಿಶ್ವ ಆರೋಗ್ಯ ಸಂಸ್ಥೆಯಿಂದ ಕೊರೊನಾ ವೈರಸ್ ಗೆ ಅಧಿಕೃತ ಹೆಸರು

ಚೀನಾ, ಫೆ. 12: ಚೀನಾದಲ್ಲಿ ಇತ್ತೀಚಿನ ದಿನಗಳಲ್ಲಿ ಕೊರೊನಾ ವೈರಸ್ ಗೆ ಜನರು ಭಯಭೀತಿಯಲ್ಲಿ ಬದುಕುತ್ತಿದ್ದಾರೆ ಕೊರೊನಾ ವೈರಸ್ ನಿಂದ ಈಗಾಗಲೇ ಸುಮಾರು ಸಾವಿನ ಸಂಖ್ಯೆ ಸಾವಿರಕ್ಕೆ ಏರಿದೆ.

ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕವೂ ಜಾಸ್ತಿಯಾಗುತ್ತಿದೆ. ಚೀನಾದಲ್ಲಿ ಹೊಸದಾಗಿ 1638 ಜನರಿಗೆ ಕೊರೊನಾ ಸೋಂಕು ತಗುಲಿದೆ. ಈವರೆಗೆ ಒಟ್ಟು 33,400 ಜನರಲ್ಲಿ ವೈರಸ್ ಪತ್ತೆಯಾಗಿರುವುದು ದೃಢಪಟ್ಟಿದೆ. ಸೋಂಕಿತರನ್ನು ಆಸ್ಪತ್ರೆಗಳ ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ಆರೋಗ್ಯ ಸಮಿತಿ ತಿಳಿಸಿದೆ.

ಈ ಮಾರಣಾಂತಿಕ ಕೊರೊನಾ ವೈರಸ್ಗೆ ವಿಶ್ವ ಆರೋಗ್ಯ ಸಂಸ್ಥೆ ‘ಕೋವಿಡ್-19’ ಎಂದು ಅಧಿಕೃತವಾಗಿ ಹೆಸರಿಟ್ಟಿದೆ. ಕೋವಿಡ್-19 ಎಂದರೆ ‘ಕೊರೊನಾ ವೈರಸ್ ಡಿಸೀಸ್ ಇನ್ 2019’ ಎಂಬ ಅರ್ಥ ಬರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧಾನಂ ಘೆಬ್ರೆಯೆಸಸ್ ಮಂಗಳವಾರ ಕೊರೊನಾ ವೈರಸ್ನ್ನು ಕೋವಿಡ್-19 ಎಂದು ಘೋಷಿಸಿದ್ದಾರೆ.

 

Related