ಕೊರೋನಾಗೆ ‘ನಟಿ’ ಬಲಿ

ಕೊರೋನಾಗೆ ‘ನಟಿ’ ಬಲಿ

ಮುಂಬೈ : ಕಿರುತೆರೆ ನಟಿ ದಿವ್ಯಾ ಭಟ್ನಾಗರ್ ಕೊರೋನಾದಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಯೇ ರಿಶ್ತಾ ಕ್ಯಾ ಕೆಹಲಾತಾ ಹೈ, ಉಡಾನ್, ಜೀತ್ ಗಯಿ ತೋ ಪಿಯಾ ಮೋ ಸೇರಿದಂತೆ ಹಲವು ಧಾರಾವಾಹಿಗಳು ಹಾಗೂ ಕೆಲವು ಸಿನಿಮಾಗಳಲ್ಲಿ ದಿವ್ಯಾ ನಟಿಸಿದ್ದರು.

ನಟಿ ದೇವಲೋನಾ ಸೇರಿದಂತೆ ಹಲವು ಕಿರುತೆರೆ ಕಲಾವಿದರು, ತಂತ್ರಜ್ಞರು ದಿವ್ಯಾರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ದಿವ್ಯಾಳ ತಾಯಿ ಮಾತನಾಡಿ, ನನ್ನ ಮಗಳು ನ್ಯುಮೋನಿಯಾದಿಂದ ಬಳಲುತ್ತಿದ್ದಳು, ಈ ನಡುವೆ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿAದ ನವೆಂಬರ್ 26 ರಂದು ಆಸ್ಪತ್ರೆಗೆ ಸೇರಿದ್ದೆವಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಮಗಳ ಅಗಲಿಕೆಯ ನೋವು ನನ್ನನ್ನು ತುಂಬಾ ಕಾಡುತ್ತಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

Related