ಮೈದಾ ಹಿಟ್ಟಿನ ಸೇವನೆ ಆರೋಗ್ಯಕ್ಕೆ ಹಾನಿಕರ!

ಮೈದಾ ಹಿಟ್ಟಿನ ಸೇವನೆ ಆರೋಗ್ಯಕ್ಕೆ ಹಾನಿಕರ!

ಸಾಮಾನ್ಯವಾಗಿ ನಾವು ನಮ್ಮ ಆಹಾರದಲ್ಲಿ ದಿನ ಮೈದಾ ಹಿಟ್ಟಿನ ಬಳಕೆಯನ್ನು ಮಾಡುತ್ತಿರುತ್ತೇವೆ ಈ ಮೈದಾಹಿಟ್ಟಿನ ಸೇವನೆ ಪ್ರತಿನಿತ್ಯ ನಮ್ಮ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳನ್ನು ನಾವು ಎದುರಿಸಬೇಕಾಗುತ್ತದೆ.

ಹೌದು ಮೈದಾ ಹಿಟ್ಟಿನ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಜೀರ್ಣಕ್ರಿಯ ಶಕ್ತಿಯು ಕಡಿಮೆಯಾಗುತ್ತದೆ ಆದ್ದರಿಂದ ಮೈದಾ ಹಿಟ್ಟಿನ ಪದಾರ್ಥಗಳನ್ನು ಸೇವಿಸುವುದು ತಪ್ಪಿಸಿದರೆ ಒಳ್ಳೆಯದು.

ಸಂಸ್ಕರಿಸಿದ ಹಿಟ್ಟಿನಲ್ಲಿ ಫೈಬರ್ ಮತ್ತು ಪೋಷಕಾಂಶಗಳು ಕಡಿಮೆ ಇರುತ್ತದೆ. ಇದರಿಂದಾಗಿ ಜೀರ್ಣಕ್ರಿಯೆ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಹಾಗೆಯೇ ಚೆನ್ನಾಗಿ ಶುದ್ಧೀಕರಿಸಿದ ಮೈದಾದಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಸೇವಿಸಿದರೆ ಜೀರ್ಣವಾಗದೇ ದೇಹದಲ್ಲಿ ನಾನಾ ಸಮಸ್ಯೆಗಳು ಉಂಟಾಗುತ್ತದೆ. ಕನಿಷ್ಠ ಒಂದು ತಿಂಗಳ ಕಾಲ ಮೈದಾ ಹಿಟ್ಟಿನಿಂದ ಮಾಡಿದ ಪದಾರ್ಥಗಳನ್ನು ಸೇವಿಸುವುದನ್ನು ನಿಲ್ಲಿಸಿದರೆ, ನೀವು ಜೀರ್ಣಕಾರಿ ಸಮಸ್ಯೆಗಳಿಲ್ಲದೇ ಇರಬದುಕಬಹುದು.

ಇಂದಿನ ಕಾಲದಲ್ಲಿ ನಾವು ಸೇವಿಸುವ ಶೇ 80ರಷ್ಟು ಆಹಾರಗಳಲ್ಲಿ ಮೈದಾ ಖಂಡಿತಾ ಇದ್ದೇ ಇರುತ್ತದೆ. ಅದರಲ್ಲಿಯೂ ಬ್ರೆಡ್, ಬಿಸ್ಕತ್ತು, ಪ್ರೋಟಾ ಮತ್ತು ಬೇಕರಿ ತಿಂಡಿಗಳಲ್ಲಿ ಮೈದಾ ಹಿಟ್ಟನ್ನು ಮುಖ್ಯವಾಗಿ ಬಳಸಲಾಗುತ್ತದೆ. ಆದರೆ ಇದನ್ನು ನಿರಂತರವಾಗಿ ಸೇವಿಸುವುದರಿಂದ ದೇಹದ ಆರೋಗ್ಯದ ಮೇಲೆ ನಾನಾ ರೀತಿ ಪರಿಣಾಮ ಬೀರುತ್ತದೆ. ಹಾಗಾಗಿ ಸಂಪೂರ್ಣವಾಗಿ ಇದರ ಸೇವನೆ ನಿಲ್ಲಿಸಬೇಕು ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ.

ನೀವು ಒಂದು ತಿಂಗಳು ಮೈದಾವನ್ನು ಸಂಪೂರ್ಣವಾಗಿ ತ್ಯಜಿಸಿದರೆ, ನಿಮ್ಮ ದೇಹದಲ್ಲಿ ಹಲವಾರು ಬದಲಾವಣೆಗಳಾವುದನ್ನು ನೀವು ಗಮನಿಸಬಹುದು. ಹಾಗಾದ್ರೆ ಮೈದಾ ಹಿಟ್ಟಿನ ಪದಾರ್ಥ ತಿನ್ನುವುದನ್ನು ಬಿಟ್ಟರೆ ಸಿಗುವ ಪ್ರಯೋಜನಗಳೇನು ಅಂತೀರಾ? ಈ ಸ್ಟೋರಿ ಓದಿ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು: ಮೈದಾದಂತಹ ಸಂಸ್ಕರಿಸಿದ ಹಿಟ್ಟಿನ ಪದಾರ್ಥ ಸೇವಿಸಿದಾಗ ದೇಹದಲ್ಲಿ ತ್ವರಿತವಾಗಿ ಗ್ಲೂಕೋಸ್ ಆಗಿ ಪರಿವರ್ತನೆಯಾಗುತ್ತದೆ. ಇದು ದೇಹದಲ್ಲಿನ ರಕ್ತದಲ್ಲಿನ ಸಕ್ಕರೆಯ ಹೆಚ್ಚಳಕ್ಕೆ ಕಾರಣವಾಗುತ್ತದೆ. ಆದ್ದರಿಂದ ಮೈದಾವನ್ನು ತಿನ್ನದೇ ಇರುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಮತ್ತು ಇನ್ಸುಲಿನ್ ಪ್ರತಿರೋಧದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ತೂಕ ನಿರ್ವಹಣೆ: ಸಂಸ್ಕರಿಸಿದ ಆಹಾರಗಳು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತವೆ ಮತ್ತು ತೂಕ ಹೆಚ್ಚಾಗಲು ಕಾರಣವಾಗುತ್ತವೆ. ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಬಿಸ್ಕತ್ತುಗಳು, ಪ್ರೋಟೋಸ್ ಮುಂತಾದ ಮೈದಾ ಹಿಟ್ಟು ಆಧಾರಿತ ಉತ್ಪನ್ನಗಳನ್ನು ತಿನ್ನುವುದನ್ನು ನಿಲ್ಲಿಸಿ.

ಹೆಚ್ಚಿನ ಶಕ್ತಿಯ ಪೂರೈಕೆ: ಸಂಸ್ಕರಿಸಿದ ಹಿಟ್ಟು ಕಾರ್ಬೋಹೈಡ್ರೇಟ್ಗಳಲ್ಲಿ ಅಧಿಕವಾಗಿರುತ್ತದೆ. ಇವುಗಳನ್ನು ಸೇವಿಸಿದಾಗ ದೇಹದ ಶಕ್ತಿ ಕುಂದುತ್ತದೆ. ಆದ್ದರಿಂದ ಮೈದಾ ಮುಂತಾದವುಗಳಿಂದ ದೂರವಿರಿ.

ಹೆಚ್ಚಿದ ಪೋಷಕಾಂಶಗಳ ಸೇವನೆ: ಮೈದಾ ಹಿಟ್ಟಿನ ಬದಲಿಗೆ ಗೋಧಿ, ಜೋಳ, ರಾಗಿಯಂತಹ ಇತರ ಆರೋಗ್ಯಕರ ಪದಾರ್ಥಗಳನ್ನು ಸೇವಿಸುವುದರ ಮೂಲಕ, ನೀವು ಫೈಬರ್, ಜೀವಸತ್ವಗಳು ಮತ್ತು ಖನಿಜಗಳಂತಹ ಅಗತ್ಯ ಪೋಷಕಾಂಶಗಳನ್ನು ಸೇವಿಸಬಹುದು.

ಉರಿಯೂತ ಕಡಿಮೆ: ಮೈದಾ ಹಿಟ್ಟು ದೇಹದಲ್ಲಿ ಉರಿಯೂತಕ್ಕೆ ಕಾರಣವಾಗಬಹುದು. ಆದರೆ ರಾಗಿ ಸೇರಿದಂತೆ ಇತರ ಧಾನ್ಯಗಳಲ್ಲಿ ಸಮೃದ್ಧವಾಗಿರುವ ಆಹಾರವು ಒಟ್ಟಾರೆ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ವರದಿಗಾರ.ಕೋಲಾರ ರೆಡ್ಡಿ

Related