ಹೊಸ ಸಂಸತ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ

ಹೊಸ ಸಂಸತ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ

ನವದೆಹಲಿ : ಹೊಸ ಸಂಸತ್ ಭವನ ಕಟ್ಟಡ ನಿರ್ಮಾಣಕ್ಕೆ ಡಿಸೆಂಬರ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸಂಸತ್ ಭವನದ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿರುವ ಮಹಾತ್ಮ ಗಾಂಧಿ ಹಾಗೂ ಬಿ.ಆರ್ ಅಂಬೇಡ್ಕರ್ ಸೇರಿದಂತೆ ಐವರು ಮಹನೀಯರ ಪ್ರತಿಮೆಗಳನ್ನು ಹೊಸ ಸಂಸತ್ ಭವನದ ಆವರಣದಲ್ಲಿ ಪುನರ್ ಪ್ರತಿಷ್ಠಾಪಿಸಲಾಗುವುದು ಎಂದು ತಿಳಿದು ಬಂದಿದೆ.

ರಾಷ್ಟ್ರಪತಿ ಮತ್ತು ರಾಜ್ಪತ್ ದೂರದಲ್ಲಿ ನಿರ್ಮಿಸಲುದ್ದೇಶಿಸಿರುವ ಹೊಸ ಸಂಸತ್ ಭವನ ಕಟ್ಟಡದ ನಿರ್ಮಾಣ ಕಾರ್ಯ 21 ತಿಂಗಳೊಳಗೆ ಪೂರ್ಣಗೊಳ್ಳಲಿದೆ. ಹೊಸ ಸಂಸತ್ ಭವನ ಕಟ್ಟಡ ನಿರ್ಮಾಣಕ್ಕೆ ಡಿ.10ರಂದು ಶಂಕುಸ್ಥಾಪನೆ ನೆರವೇರುವ ಸಾಧ್ಯತೆ ಇದೆ.

ಒಂದು ವೇಳೆ ಪ್ರಧಾನಮಂತ್ರಿಗಳ ಸಮಯ ನಿಗದಿಯಾಗದಿದ್ದರೆ. ಶಂಕುಸ್ಥಾಪನೆ ದಿನಾಂಕ ಮುಂದೂಡುವ ಸಾಧ್ಯತೆ ಇದೆ. ಹೊಸ ಭವನದಲ್ಲಿ ಎಲ್ಲಾ ಸಂಸದರಿಗೂ ಪ್ರತ್ಯೇಕ ಕಚೇರಿಗಳನ್ನು ನಿರ್ಮಿಸಲಾಗಿದ್ದು, ಪ್ರತಿಯೊಂದು ಕಚೇರಿಗೂ ಡಿಜಿಟಲ್ ಟಚ್ ನೀಡಲಾಗಿದ್ದು , ಎಲ್ಲಾ ಕಚೇರಿಗಳು ಪೇರ‍್ಲೆಸ್ ಚಟುವಟಿಕೆಗಳಿಂದ ಕೂಡಿರುತ್ತವೆ.

ಭವನದ  ಗೇಟ್  ನಂ.1  ಪ್ರವೇಶ  ದ್ವಾರದಲ್ಲಿ  16  ಅಡಿ  ಎತ್ತರದ  ಮಹಾತ್ಮ  ಗಾಂಯವರು  ಧ್ಯಾನಮಗ್ನರಾಗಿ  ಕುಳಿತಿರುವಂತಹ  ಪ್ರತಿಮೆ ಪ್ರತಿಷ್ಠಾಪಿಸಲಾಗುತ್ತಿದೆ. ಹಾಲಿ  ಸಂಸತ್  ಭವನಕ್ಕೆ  1921  ಫೆ.12ರಂದು  ಶಂಕುಸ್ಥಾಪನೆ  ನೆರವೇರಿಸಿ,  83  ಲಕ್ಷ ಖರ್ಚು  ಮಾಡಿ  ಆರು  ವರ್ಷ ಶ್ರಮಿಸಿ  ಕಟ್ಟಡ  ನಿರ್ಮಾಣ  ಪೂರ್ಣಗೊಳಿಸಿ  1927  ಜ.18ರಂದು  ಅಂದಿನ  ಗೌರ್ನರ್  ಜನರಲ್  ಲಾರ್ಡ್  ಇರ್ವಿನ್  ಸಂಸತ್  ಭವನವನ್ನು ಉದ್ಘಾಟಿಸಿದ್ದರು.

ಹಾಲಿ ಸಂಸತ್ ಭವನ ನಿರ್ಮಾಣಗೊಂಡು ನೂರು ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಹೊಸ ಸಂಸತ್ ಭವನ ನಿರ್ಮಾಣಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮುನ್ನುಡಿ ಬರೆಯಲಿದ್ದಾರೆ.

Related