ಕಾಂಗ್ರೆಸ್‌ಗೆ ನಾಚಿಕೆ ಆಗಬೇಕು: ಕಿಶನ್ ರೆಡ್ಡಿ

ಕಾಂಗ್ರೆಸ್‌ಗೆ ನಾಚಿಕೆ ಆಗಬೇಕು: ಕಿಶನ್ ರೆಡ್ಡಿ

ಬೆಂಗಳೂರು: ಶುಕ್ರವಾರ ಕೋರಮಂಗಲ ಬಿಜೆಪಿ ಕಛೇರಿಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಕಿಶನ್ ರೆಡ್ಡಿಯವರು ಬಜರಂಗದಳವೇನಾದರೂ ಟೆರರಿಸ್ಟ್ಗಳಾ? ಅವರೇನಾದ್ರೂ ದಾಳಿ ಮಾಡಿದ್ರಾ? ಬಜರಂಗದಳ ಬ್ಯಾನ್ ಮಾಡೋಕೆ ನಿಮಗೆ ಧೈರ್ಯ ಇದೆಯಾ ಎಂದು ಪ್ರಶ್ನಿಸಿದರು. ಯುವಕರಿಗೆ ಚೈತನ್ಯ ನೀಡುವಂತಾ ಸಂಘಟನೆ ಬಜರಂಗದಳ. ಇವತ್ತು ಬಜರಂಗದಳ ಬ್ಯಾನ್ ಅಂತೀರಾ , ನಾಳೆ ಜೈ ಶ್ರೀರಾಮ್ ಅನಬಾರ್ದು ಅಂತ ಹೇಳ್ತೀರಾ. ಆಮೇಲೆ ಭಾರತ್ ಮಾತಾಕಿ ಜೈ ಅನಬಾರ್ದು ಅಂತೀರಾ. ಇದು ಕಾಂಗ್ರೆಸ್‌ನ ಯೋಚನೆ ಎಂದು ನುಡಿದರು.

ಬಿಜೆಪಿ ಮೋದಿ ನಾಯಕತ್ವದಲ್ಲಿ ಅಭಿವೃದ್ಧಿ ಕಾರ್ಯ ನಡೀತಿದೆ. ಭಾರತ ದೇಶ ಗೌರವದಿಂದ, ಎಲ್ಲಾ ರಂಗದಲ್ಲಿ ಅಭಿವೃದ್ಧಿ ಆಗಬೇಕು ಎಂದು ಯೋಚಿಸುವವರು ಮೋದಿಯವರು. ಈ ಹಿಂದೆ ಒಮ್ಮೆ ಬೆಂಗಳೂರನ್ನು ನೋಡಿದಾಗ ರಸ್ತೆಗಳೆಲ್ಲಾ ಕಿತ್ತು ಹೋಗಿದ್ದವು. ಇದೀಗ ಎಲ್ಲಾ ಕಡೆ ಸಿಮೆಂಟ್ ರಸ್ತೆಗಳಿದೆ. ಈ ಹಿಂದೆ ಅಮೇರಿಕಾ ಹೋದಾಗ ಈ ತರಹದ ರಸ್ತೆಗಳನ್ನು ನಾನು ಕಂಡಿದ್ದೆ ಎಂದು ನೆನಪುಗಳನ್ನು ಮೆಲುಕು ಹಾಕಿದರು.

ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ, ಸೋನಿಯಾ ಗಾಂಧಿ, ಮನಮೋಹನ್ ಸಿಂಗ್‌ರವರ ಕಾಲದಲ್ಲಿ ದೇಶ ಹೇಗಿತ್ತು.  ಹತ್ತು ಲಕ್ಷ ಕೋಟಿ ಭ್ರಷ್ಟಾಚಾರ ನಡೆಯಿತು. ಇಷ್ಟೆಲ್ಲಾ ಅಕ್ರಮ ನಡೀತಿದ್ರೂ ಮನಮೋಹನ್ ಸಿಂಗ್ ಮೌನ ಬಾಬಾ ಆಗಿದ್ರು. ಅದಕ್ಕೆ ಜನ ನಿರ್ಣಯಿಸಿ ಮೋದಿಯಂತಹ ದಿಟ್ಟ ನಾಯಕ ನಮಗೆ ಪ್ರಧಾನಿಯಾಗಿ ಬಂದ್ರು.

ಬಿಟಿಎಂ ಕ್ಷೇತ್ರದಲ್ಲಿ ಅಭಿವೃದ್ದಿ ಎಂಬುದು ಮರೀಚಿಕೆಯಾಗಿದೆ. ಈ ಭಾರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಆರ್. ಶ್ರೀಧರ್ ರೆಡ್ಡಿಯವರಿಗೆ ಮತ ನೀಡಿ ಅಭಿವೃದ್ದಿಗೆ ಮುನ್ನುಡಿ ಬರೆಯಿರಿ ಎಂದು ಜನತೆಯಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯೆ ಸರಸ್ವತಮ್ಮ, ಬಿಜೆಪಿ ಮುಖಂಡ ಸುಧಾಕರ್ ರೆಡ್ಡಿ, ಮಂಡಲ ಅಧ್ಯಕ್ಷ ರಾಜೇಂದ್ರ ರೆಡ್ಡಿ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು ಭಾಗವಹಿಸಿದ್ದರು.

Related