ಅರಗ ಜ್ಞಾನೇಂದ್ರ ವಿರುದ್ದ ಕಾಂಗ್ರೆಸ್ ಪ್ರತಿಭಟನೆ

ಅರಗ ಜ್ಞಾನೇಂದ್ರ ವಿರುದ್ದ ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು: ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ರವರ ಮೈ ಬಣ್ಣದ ಬಗ್ಗೆ ಮಾತನಾಡಿರುವ ಕೀಳು ಮಟ್ಟದ ರಾಜಕಾರಣಿ ಹಾಗೂ ಬಿಜೆಪಿಯ ಅರಗಜ್ಞಾನೇಂದ್ರ ವಿರುದ್ಧ ಪ್ರತಿಭಟನೆ ಹಾಗೂ ಪ್ರತಿಕೃತಿ ದಹನ ಮಾಡಿ ಅರಗ ಜ್ಞಾನೇಂದ್ರ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.

ಕಸ್ತೂರಿ ರಂಗನ್ ವರದಿ ಬಗ್ಗೆ ಸಂಬಂಧಪಟ್ಟ ಅರಣ್ಯ ಸಚಿವಾರದ ಈಶ್ವರ್ ಖಂಡ್ರೆ ರವರು ಈಗಾಗಲೇ ಸ್ಪಷ್ಟ ಉತ್ತರವನ್ನು ನೀಡಿದ್ದಾರೆ. ಮಾಜಿ ಗೃಹ ಸಚಿವರ ತಮ್ಮ ಭಾಷಣದಲ್ಲಿ ಆ ಭಾಗದಲ್ಲಿ ಅರಣ್ಯ ಪ್ರದೇಶ ಇಲ್ಲ ಆದ್ದರಿಂದ ಮಲ್ಲಿಕಾರ್ಜುನ ಖರ್ಗೆ ರವರು ಕಪ್ಪಾಗಿದ್ದಾರೆ ಎಂಬುವ ಹೇಳಿಕೆ ನೀಡಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ರವರ ಹೆಸರನ್ನು ಪ್ರಸ್ತಾಪಿಸುವ ಅರ್ಹತೆ ಅರಗ ಜ್ಞಾನೇಂದ್ರ ರವರಿಗೆ ಇಲ್ಲ ರಾಷ್ಟ್ರಮಟ್ಟದ ನಾಯಕರ ಬಗ್ಗೆ ಮಾತನಾಡುವಾಗ ಅವರ ವ್ಯಕ್ತಿತ್ವವನ್ನು ಅರಿತು ಮಾತನಾಡುವ ಸೌಜನ್ಯವೂ ಇಲ್ಲದ ಒಬ್ಬ ಮಾಜಿ ಗೃಹ ಸಚಿವ ಎಂದರೆ ಅರಗ ಜ್ಞಾನೇಂದ್ರ ಎಂದು ಈಗ ಸಾಬೀತಾಗಿದೆ.

ಒಬ್ಬ ದಲಿತ ನಾಯಕರು ಕನ್ನಡಿಗರು ರಾಷ್ಟ್ರಮಟ್ಟದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿರುವ ಅವರ ಹೆಸರನ್ನು ಪ್ರಸ್ತಾಪಿಸುವಾಗ ಪರಿಜ್ಞಾನವಿಲ್ಲದೆ ಮಾತನಾಡಿರುವ ಈ ವ್ಯಕ್ತಿಯನ್ನ ಬಿಜೆಪಿ ಇನ್ನು ಪಕ್ಷದಿಂದ ವಜಾ ಗೊಳಿಸಿದೆ ಇರುವುದು ಆಶ್ಚರ್ಯವನ್ನು ತರುತ್ತದೆ

ದಲಿತ ನಾಯಕರು ಕಾಂಗ್ರೆಸ್ ಪಕ್ಷದ ಮುಖಂಡರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ರವರ ಬಣ್ಣದ ಬಗ್ಗೆ ಮಾತನಾಡಿರುವ ಕೀಳುಮಟ್ಟದ ರಾಜಕಾರಣಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿ ಪ್ರತಿಕೃತಿ ಯನ್ನು ದಹಿಸಲಾಯಿತು ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಮನೋಹರ್ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಎ.ಆನಂದ್, ಜಿ.ಜನಾರ್ಧನ್ ಪ್ರಕಾಶ್,ಪರಿಸರ ರಾಮಕೃಷ್ಣ,ಜಿ.ಮೋಹನ್,ಓಬಳೇಶ್, ಚಿನ್ನಿ ಪ್ರಕಾಶ್, ಹೇಮಣ್ಣ, ಚಂದ್ರಶೇಖರ್,ಪುಟ್ಟರಾಜು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Related