‘ಚೊಂಬು’ ಹಿಡಿದು ಕಾಂಗ್ರೆಸ್ ಪ್ರತಿಭಟನೆ

‘ಚೊಂಬು’ ಹಿಡಿದು ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು: ಕೇಂದ್ರದ ಬಿಜೆಪಿ ಸರ್ಕಾರ ಕಳೆದ ಹತ್ತು ವರ್ಷದಿಂದ ಕರ್ನಾಟಕ ರಾಜ್ಯಕ್ಕೆ ಅನ್ಯಾಯ, ಮೋಸ ಮಾಡುತ್ತಾ ಬಂದಿದೆ ಎಂಬ ಆರೋಪದ ಮೇಲೆ ಇಂದು (ಶನಿವಾರ ಎಪ್ರಿಲ್ 20) ರಂದು ಬೆಂಗಳೂರು ನಗರದಲ್ಲಿ ಕಾಂಗ್ರೆಸ್ ಪಕ್ಷವು ‘ಚೊಂಬು’ ಹಿಡಿದು ವಿನೂತನ ಪ್ರತಿಭಟನೆಯನ್ನು ಕೈಗೊಂಡಿದೆ.

ಮೇಖ್ರಿ ಸರ್ಕಲ್ ಬಳಿ ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜಿವಾಲ ನೇತೃತ್ವದಲ್ಲಿ ‘ಚೊಂಬು ಹಿಡಿದು’ ಕೇಂದ್ರದಿಂದ ರಾಜ್ಯಕ್ಕೆ ಸಿಕ್ಕಿದ್ದು ಕೇವಲ ಖಾಲಿ ಚೊಂಬು ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.

ಇನ್ನು ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸುರ್ಜಿವಾಲ, ರಾಜ್ಯದಲ್ಲಿ ಈಗಾಗಲೇ ಬರಪೀಡಿತ ಪ್ರಾರಂಭವಾಗಿದ್ದು ಇದರ ಬಗ್ಗೆ ಈಗಾಗಲೇ ನಾವು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು ಕೂಡ ಪರಿಹಾರದ ಹಣ ನೀಡಿಲ್ಲವೆಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಮೋದಿ ಮತ್ತು ಬಿಜೆಪಿಯವರು ಕರುನಾಡಿನ ಜನತೆಗೆ ಬಿಜೆಪಿ ಸರ್ಕಾರ ಚೊಂಬು ಕೊಟ್ಟಿದ್ದಾರೆ. ಬರ ಪರಿಹಾರ ವಿಚಾರದಲ್ಲಿ 18 ಸಾವಿರ ಕೋಟಿ, 15ನೇ ಹಣಕಾಸು ಆಯೋಗದಿಂದ ನೀಡಬೇಕಿದ 62 ಸಾವಿರ ಕೋಟಿ ರೂ. ಚೊಂಬು ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.

 

Related