ಬಿಜೆಪಿ ಭದ್ರಕೊಟೆಗೆ ಕಾಂಗ್ರೆಸ್ ಲಗ್ಗೆ ಸಜ್ಜು

ಬಿಜೆಪಿ ಭದ್ರಕೊಟೆಗೆ ಕಾಂಗ್ರೆಸ್ ಲಗ್ಗೆ ಸಜ್ಜು

ಹಾವೇರಿ: ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇದ್ದು, ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಇನ್ನು ಬಿಜೆಪಿಯ ಭದ್ರಕೋಟೆಯಾಗಿರುವ ಹಾವೇರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಲಗ್ಗೆ ಇಡಲು ಚಿಂತನೆ ನಡೆಸಿದೆ.

ಹೌದು, ಹಾವೇರಿ ಜಿಲ್ಲೆಯು ಬಿಜೆಪಿಯ ಭದ್ರಕೋಟೆಯಾಗಿದ್ದರಿಂದ ಈ ಕ್ಷೇತ್ರದಲ್ಲಿ ಬಿಜೆಪಿ ಮೇಲುಗೈ ಸಾಧಿಸುತ್ತದೆ. ಆದರೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್ ಪಕ್ಷ ಸಜ್ಜಾಗಿದೆ.

ಯೆಸ್.. ಹಾವೇರಿ, ಗದಗ ಕ್ಷೇತ್ರದಲ್ಲಿ ಆಕಾಂಕ್ಷಿಗಳು ಭರ್ಜರಿ ತಯಾರಿ ನಡೆಸಿದ್ದಾರೆ. ಹಾಲಿ ಸಂಸದ ಶಿವಕುಮಾರ್ ಉದಾಸಿ ಚುಣಾವಣೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದರಿಂದ 2 ಪಕ್ಷಗಳಲ್ಲಿ ಅಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ 3 ಬಾರಿ ಹಾವೇರಿ ಜಿಲ್ಲೆಯವರಾದ ಶಿವಕುಮಾರ್ ಉದಾಸಿ ಬಿಜೆಪಿಯಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು. ಬಿಜೆಪಿ ಭದ್ರ ಕೋಟೆಯಾದ ಹಾವೇರಿ ಲೋಕಸಭಾ ಕ್ಷೇತ್ರವು ಹಾವೇರಿಯ 5 ವಿಧಾನಸಭಾ ಕ್ಷೇತ್ರ ಗದಗ ಜಿಲ್ಲೆಯ ಮೂರು ಕ್ಷೇತ್ರ ಹೊಂದಿದ್ದು ಕಾಂಗ್ರೆಸ್ ಗೆಲುವು ಸಾಧಿಸಲು ಹರಸಾಹಸ ಪಡುತ್ತಿದೆ.

ಕಾಂಗ್ರೆಸ್ ಪಕ್ಷದಲ್ಲೂ ಹಲವಾರು ಜನ ನೀರಿಕ್ಷೆ ಇಟ್ಟು ಕೊಂಡಿದ್ದಾರೆ. ಇನ್ನು 8 ವಿಧಾನ ಸಭಾ ಕ್ಷೇತ್ರಗಳಲ್ಲಿ ಶಿರಹಟ್ಟಿಯ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದು ಉಳಿದ 7 ಕಾಂಗ್ರೆಸ್ ಶಾಸಕರನ್ನು ಹೊಂದಿದೆ. ಇದು ಬಿಜೆಪಿ ಆಕಾಂಕ್ಷಿಗಳಿಗೆ ಸವಾಲಾಗಿದೆ. ಆದರೆ ಕಳೆದ ಎರಡು ಬಾರಿ ಪ್ರಧಾನಿ ನರೇಂದ್ರ ಮೋದಿಯವರ ಅಲೆಯಲ್ಲಿ ಬಿಜೆಪಿ ಗೆದ್ದು ಬೀಗಿತ್ತು.

ಶಿವಕುಮಾರ್ ಉದಾಸಿಯವರ ವಿರುದ್ದ ಎರಡು ಸಾರಿ ಕಾಂಗ್ರೆಸ್ ಎಂಎಲ್ಸಿ ಕಾರ್ಯಾಧ್ಯಕ್ಷ ಸಲಿಂ ಅಹಮದ್ ಸೋಲನ್ನು ಕಂಡರೆ, ಒಂದು ಸಲ ಮಾಜಿ ಶಾಸಕ ಸಚಿವ ಎಚ್ ಕೆ ಪಾಟೀಲ್ ಸಹೋದರ ಡಿ ಆರ್ ಪಾಟೀಲ್ ಸೋಲನುಭವಿಸಿದ್ದರು. 350 ಕಿಮಿ ವಿಸ್ತೀರ್ಣ ಹೊಂದಿದ 17 ಲಕ್ಷ ಮತದಾರರನ್ನು ಹೊಂದಿದ ದೊಡ್ಡ ಕ್ಷೇತ್ರ ಇದಾಗಿದ್ದು ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಮಾಜಿ, ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಪುತ್ರ ಕೆ ಇ ಕಾಂತೇಶ ಎರಡು ಜಿಲ್ಲೆಗಳಲ್ಲಿ ಕಳೆದ ಮೂರು ತಿಂಗಳಿಂದ ಸಕ್ರೀಯರಾಗಿ ಓಡಾಡುತ್ತಿದ್ದಾರೆ.

 

Related