ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡುತ್ತಿದೆ ರಾಜ್ಯ ಸರ್ಕಾರ – ಅನ್ವರ್ ಮಾಣಿಪ್ಪಾಡಿ

ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡುತ್ತಿದೆ ರಾಜ್ಯ ಸರ್ಕಾರ – ಅನ್ವರ್ ಮಾಣಿಪ್ಪಾಡಿ

ಮಂಗಳೂರು, ಜೂ 28 : ರಾಜ್ಯಸರ್ಕಾರ ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡುತ್ತಿದೆ. ವ್ಯಾಪಾರ ನಿರ್ಬಂಧ, ಹಲಾಲ್ ದಂಗಲ್ ಹೆಸರಲ್ಲಿ ಮುಸ್ಲಿಮರ ಬಗ್ಗೆ ತಾರತಮ್ಯ ಮಾಡುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಜಂಟಿ ವಕ್ತಾರ, ಮೈನಾರಿಟಿ ಕಮಿಷನ್ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ಆಸ್ತಿ ಬಗ್ಗೆ ವರದಿ ನೀಡಿರುವುದನ್ನು ನಿರ್ಲಕ್ಷಿಸಿದ್ದು, ಮುಸ್ಲಿಮರಿಗೆ ಅವಮಾನಿಸಿದ್ದಾರೆ. ಮೋದಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಹೇಳಿದ್ದು ರಾಜ್ಯದಲ್ಲಿ ಅನುಷ್ಠಾನ ಆಗುತ್ತಿಲ್ಲ. ಸಂವಿಧಾನದಡಿ ಮುಸ್ಲಿಮರ ಹಕ್ಕುಗಳನ್ನು ಉಲ್ಲಂಘಿಸಿ, ಅಗೌರವ ನೀಡುತ್ತಿರುವುದು ಸಹಿಸಲ್ಲ. ಮುಸ್ಲಿಂ ಹಕ್ಕುಗಳ ಪರವಾಗಿ ರಾಜ್ಯಸರ್ಕಾರದ ಎಲ್ಲ ಸೌಲಭ್ಯಗಳನ್ನು ಹಿಂದಕ್ಕೆ ನೀಡುತ್ತೇನೆ. ನನಗೆ ನೀಡಿರುವ ಗನ್​ಮೆನ್​, ಮೈನಾರಿಟಿ ಕಮಿಷನ್ ಮಾಜಿ ಅಧ್ಯಕ್ಷನ ಸವಲತ್ತು ಹಿಂದಕ್ಕೆ ನೀಡುತ್ತೇನೆ. ಹೈಕೋರ್ಟ್ ಹೇಳಿದರೂ ವಕ್ಫ್ ಆಸ್ತಿ ಕಬಳಿಕೆಯ ಬಗ್ಗೆ ಸರಕಾರ ವರದಿ ಜಾರಿ ಮಾಡುತ್ತಿಲ್ಲ.

ನಾನು ಜೀವ ಇರೋವರೆಗೂ ಸತ್ಯ ಹೇಳುತ್ತೇನೆ, ಪಕ್ಷದಿಂದ ಹೊರಗೆ ಹಾಕಿದ್ರೆ ಹಾಕಲಿ. ಪಕ್ಷದಲ್ಲಿದ್ದೇ ಅನ್ಯಾಯ ಪ್ರಶ್ನಿಸುತ್ತೇನೆ, ಅಲ್ಪಸಂಖ್ಯಾತರ ಪರ ಹೋರಾಡುತ್ತೇನೆ. ಜನರನ್ನು ದಿಕ್ಕು ತಪ್ಪಿಸಿ ಕೋಮುಗಲಭೆ ಎಬ್ಬಿಸಲು ಕಾರಣರಾಗಬೇಡಿ. ಬಪ್ಪನಾಡಿನಲ್ಲಿ ಎಲ್ಲರೂ ಜೊತೆಯಾಗಿದ್ದರು, ವ್ಯಾಪಾರಸ್ಥರ ಒಗ್ಗಟ್ಟು ಒಡೆದು ಹಾಕಿದರು. ಯಡಿಯೂರಪ್ಪ, ಈಗಿನ ಸಿಎಂ ಬೊಮ್ಮಾಯಿ ಕೂಡ ಅಲ್ಪಸಂಖ್ಯಾತ ವಿರೋಧಿ ಎಂದು ಕಿಡಿಕಾರಿದರು.

 

Related