ಪೆಟ್ರೋಲ್ ಬೆಲೆ ಇಳಿಕೆ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ..

ಡೀಸೆಲ್, ಪೆಟ್ರೋಲ್ ಬೆಲೆ ಇಳಿಕೆಯ ಬಗ್ಗೆ ನಾನು ತಕರಾರು ಮಾಡ್ತಿಲ್ಲ, ಆದರೆ ಈ ವರ್ಷದ ಮಾರ್ಚ್ ನಿಂದ ಈ ವರೆಗೆ ಬೆಲೆ ಎಷ್ಟು ಹೆಚ್ಚಾಗಿದೆ? ಐದು ರಾಜ್ಯಗಳ ಚುನಾವಣೆ ಆದ ಮೇಲೆ ಬರೀ ಎರಡೇ ತಿಂಗಳಲ್ಲಿ 11 ರೂಪಾಯಿಗಿಂತ ಬೆಲೆ ಹೆಚ್ಚು ಮಾಡಿದ್ದಾರೆ. ಈಗ ಇಳಿಸಿದ್ದು ಎಷ್ಟು? ಇದು ಹೆಚ್ಚು ಮಾಡಿ, ಇಳಿಸಿದ್ದು ಅಷ್ಟೆ.

ಮೋದಿ ಅವರು ಪ್ರಧಾನಿಯಾದಾಗ ಗ್ಯಾಸ್ ಬೆಲೆ 414 ರೂಪಾಯಿ ಇತ್ತು, ಈಗ 1050 ರೂಪಾಯಿ ಆಗಿದೆ, ಇದನ್ನು ಜಾಸ್ತಿ ಮಾಡಿದ್ದು ಯಾರು ಮನಮೋಹನ್ ಸಿಂಗ್ ಅವರ? ನರೇಂದ್ರ ಮೋದಿ ಅವರ? ಆಗ ಪೆಟ್ರೋಲ್ ಬೆಲೆ 68 ರೂಪಾಯಿ, ಡೀಸೆಲ್ ಬೆಲೆ 46 ರೂಪಾಯಿ ಇತ್ತು, ಇವತ್ತು ನೂರು ರೂಪಾಯಿ ಆಗಿದೆ. ಹಾಗಾದ್ರೆ ಬೆಲೆ ಎಲ್ಲಿ ಕಡಿಮೆ ಆಗಿದೆ ಹೇಳಿ.

ಎರಡು ವರ್ಷದಿಂದ ಪಕ್ಷ ಕಟ್ಟಿದೀನಿ, ಈಗ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಚರ್ಚೆ ಮಾಡ್ತಿದ್ದಾರೆ ಎಂಬ ಡಿ.ಕೆ ಶಿವಕುಮಾರ್ ಅವರ ಹೇಳಿಕೆ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ಅವರು, ಇದನ್ನೆಲ್ಲ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ, ಬಹಿರಂಗವಾಗಿ ಚರ್ಚೆ ಮಾಡುವ ವಿಷಯ ಅಲ್ಲ ಎಂದರು. ನಾನು ಮತ್ತು ಕೆಪಿಸಿಸಿ ಅಧ್ಯಕ್ಷರಾದ ಶಿವಕುಮಾರ್ ಅವರು ಯಾವೆಲ್ಲ ಜಾತಿಗಳ ಪರಿಸ್ಥಿತಿ ಹೇಗಿದೆ ಮತ್ತು ಯಾರಿಗೆ ಅವಕಾಶ ನೀಡಬೇಕು, ಚುನಾವಣೆ ದೃಷ್ಟಿಯಿಂದ ಯಾರಿಗೆ ಅವಕಾಶ ನೀಡಬೇಕು, ಎರಡೇ ಸ್ಥಾನಗಳು ಇರೋದ್ರಿಂದ ಯಾರಿಗೆ ಕೊಡಬೇಕು ಎಂಬುದನ್ನು ಯೋಚನೆ ಮಾಡಿ ಹೈಕಮಾಂಡ್ ಗೆ ಹೇಳಿ ಬಂದಿದ್ದೀವಿ. ಹೈಕಮಾಂಡ್ ಈ ಬಗ್ಗೆ ತೀರ್ಮಾನ ಮಾಡಿ ಸಂಜೆ ಒಳಗೆ ಪಟ್ಟಿ ಬಿಡುಗಡೆ ಮಾಡುತ್ತದೆ.

ಪಠ್ಯಪುಸ್ತಕವು ಧರ್ಮ ನಿರಪೇಕ್ಷತೆ, ವೈಚಾರಿಕತೆ, ವೈಜ್ಞಾನಿಕತೆಯನ್ನು ವಿದ್ಯಾರ್ಥಿಗಳಲ್ಲಿ ಮೂಡುವಂತೆ ಮಾಡಬೇಕು. ವಿದ್ಯಾರ್ಥಿಗಳ ಜ್ಞಾನ ವಿಕಾಸವಾಗಬೇಕು, ಹೀಗಾಗಿ ಯಾವುದೇ ಧರ್ಮದ ವಿಚಾರಗಳನ್ನು ತುರುಕಬಾರದು. ನಮ್ಮದು ಜಾತ್ಯಾತೀತ ರಾಷ್ಟ್ರ. ಮಕ್ಕಳಲ್ಲಿ ಇದೇ ಭಾವನೆ ಬೆಳೆಸುವ ಕೆಲಸ ಮಾಡಬೇಕು. ಅಂಧಶ್ರದ್ಧೆಯನ್ನು ಮಕ್ಕಳಿಗೆ ಕಲಿಸಬಾರದು.

Related