ಸರ್ಕಾರಿ ವಾಹನ ದುರ್ಬಳಕೆ ಮಾಡಿಕೊಂಡ ಸಿದ್ದರಾಮಯ್ಯ ವಿರುದ್ಧ ದೂರು ದಾಖಲು..!!

ಸರ್ಕಾರಿ ವಾಹನ ದುರ್ಬಳಕೆ ಮಾಡಿಕೊಂಡ ಸಿದ್ದರಾಮಯ್ಯ ವಿರುದ್ಧ ದೂರು ದಾಖಲು..!!

ಮಂಡ್ಯ: ಪರಿಷತ್ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಾಗಿದೆ.
ಮೇ 24ರಂದು ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ವಾಹನ ಬಳಸಿದ್ದರು. ಪ್ರಚಾರ ಸಭೆಯಲ್ಲಿ ಸರ್ಕಾರಿ ವಾಹನ ದುರುಪಯೋಗದ ಆರೋಪ ಮೇರೆಗೆ ದಕ್ಷಿಣ ಪದವೀಧರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗೆ ಮಂಡ್ಯ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುರೇಶ್ ದೂರು ಸಲ್ಲಿಸಿದ್ದಾರೆ.

ಸಿದ್ದರಾಮಯ್ಯ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿ, ಸರ್ಕಾರಿ ವಾಹನದ ದುರುಪಯೋಗ ಪಡಿಸಿಕೊಂಡಿದ್ದು, ಕಾನೂನು ಕ್ರಮಕೈಗೊಳ್ಳವಂತೆ ಆಗ್ರಹಿಸಿದ್ದಾರೆ. ಸರ್ಕಾರಿ ಕಾರು ದುರ್ಬಳಕೆಯ ಫೋಟೋ, ಸಿಡಿ ಮೂಲಕ ದೂರು ನೀಡಿದ್ದಾರೆ.

ವಿರೋಧ ಪಕ್ಷದ ನಾಯಕ ಸರ್ಕಾರಿ ವಾಹನ ದುರುಪಯೋಗ ಪಡಿಸಿಕೊಳ್ಳುವುದು ಎಷ್ಟು ಸರಿ? ನೀತಿ ಸಂಹಿತೆ ಅವರಿಗೆ ಬೇರೆ, ನಮಗೆ ಬೇರೆ ಇದ್ಯಾ?ಎಲ್ಲರೂ ಕಡ್ಡಾಯವಾಗಿ ನಿಯಮ ಪಾಲನೆ ಮಾಡಲೇಬೇಕು. ಸಿದ್ದರಾಮಯ್ಯ ಅವರು ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿದೆ. ಕ್ರಮ ವಹಿಸಲು ರಾಜ್ಯ ಚುನಾವಣಾ ಆಯೋಗಕ್ಕೂ ಒತ್ತಾಯ ಮಾಡ್ತೇವೆ. ಅಶ್ವತ್ಥ್ ನಾರಾಯಣ್ ಎಲ್ಲೂ ಕೂಡ ನೀತಿ ಸಂಹಿತೆ ಉಲ್ಲಂಘನೆ ಮಾಡಿಲ್ಲ. ಸರ್ಕಾರಿ ಕಾರು, ಸರ್ಕಾರಿ ವಸ್ತುಗಳನ್ನ ಅವರು ಬಳಸಿಲ್ಲ. ನಾವೇ ನೆಕ್ಸ್ಟ್ ಸರ್ಕಾರ ರಚಿಸುತ್ತೇವೆ ಅನ್ನೋ ಮಹಾದಾಸೆ ಗುಂಗಲ್ಲಿ ಕಾಂಗ್ರೆಸ್​ನವರಿದ್ದಾರೆ

Related