ಭಾವೈಕ್ಯ ನಗರದಲ್ಲಿ ಸಂಕೀರ್ತನಾ ಯಾತ್ರೆ

ಭಾವೈಕ್ಯ ನಗರದಲ್ಲಿ ಸಂಕೀರ್ತನಾ ಯಾತ್ರೆ

ಗಜೇಂದ್ರಗಡ : ಹನುಮ ಜಯಂತಿ ಅಂಗವಾಗಿ ನೂರಾರು ಮಂದಿ ಹನುಮಾನ್ ಮಾಲಾಧಾರಿಗಳು ಶುಕ್ರವಾರದಂದು ನಗರದಲ್ಲಿ ಸಂಕೀರ್ತನ ಯಾತ್ರೆ ನಡೆಸಿದರು.

ಪಟ್ಟಣದ ಶಿವಾಜಿ ಪೇಟೆಯಲ್ಲಿನ ಮಾರುತಿ ದೇವಾಲಯದಿಂದ ಪ್ರಾರಂಭವಾದ ಯಾತ್ರೆಯು ನಗರದ ಕೊಳ್ಳೆಯವರ ವೃತ್ತ, ಭಜರಂಗದಳ ವೃತ್ತ, ಬಸವೇಶ್ವರ ವೃತ್ತ, ದುರ್ಗಾ ವೃತ್ತ, ಜೋಡು ರಸ್ತೆ, ಕಾಲಕಾಲೇಶ್ವರ ವೃತ್ತದ ಮಾರ್ಗವಾಗಿ ಗೊಲ್ಲರ ಓಣಿಯ ಸಮುದಾಯ ಭವನದ ಮುಂದೆ ಹನುಮಾನ ಮಾಲಾಧಾರಿಗಳಿಂದ ಪೂಜೆ ನಡೆಯಿತು.

ಮಾಲಾಧಾರಿಗಳಿಗೆ ಅಲ್ಲಲ್ಲಿ ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸುತ್ತಿದ್ದ ದೃಶ್ಯ ಕಂಡು ಬಂತು. ವ್ರತಧಾರಿಗಳು ತಾಳ ಸಹಿತ ಭಜನೆ ಮಾಡುತ್ತಾ ಮುಸ್ಲಿಂ ಸಮುದಾಯದಿಂದ ಹಣ್ಣು ಹಂಪಲು ವಿತರಣೆ ಒಂದಡೆ ಜಾತಿ ಜಾತಿ ನಡುವೆ ವಿಷ ಬೀಜ ಬಿತ್ತುವ ಕಾರ್ಯ ನಡೆದಿದೆ.

ಈ ಸಂದರ್ಭದಲ್ಲಿ ಭಜನಾ ಮಂಡಳಿ ಸದಸ್ಯ ಹನುಮಂತ ಕೆಂಚಿ, ವಿಠ್ಠಲ ಮಿಸ್ಕಿ, ಯಮನೂರ್ ಭಜಂತ್ರಿ, ಸಂಗಪ್ಪ ಮಡಿವಾಳ, ಸುಭಾಷ್ ಹಂಚಾಟೆ, ನಾಗರಾಜ್ ಹುಣಸಿಕಟ್ಟಿ, ಶಂಕರ್ ರಾಠೋಡ, ಕಿರಣ ನಿಡಗುಂದಿ, ಮಲ್ಲು ಸಂಗಳದ, ಗೌರಿ ಕೆಂಚಿ, ರೇಣುಕಾ ಕರ್ಣಿ, ರಾಜೂ ಸಾಂಗ್ಲೀಕರ್, ಸೋಹಿಲ್ ಮುಧೋಳ, ಅಲಿ ಮುಧೋಳ, ಆಸೀಫ ಸಾಂಗ್ಲೀಕರ್, ಪಾಷಾ ಗಂಗಾವತಿ, ಬಾಷಾ ಮುದಗಲ್, ಜಿಲಾಜಿ ಖಾಜಿ,ಮೆಹರಖಾನ ಲೋದಿ, ಅಂದಪ್ಪ ಸಂಕನೂರ, ಸಂಜೀವ ಜೋಷಿ, ಶಂಕರ ಇಂಜನಿ, ಮಾಂತು ಗಂದದ, ಗಣೇಶ ದಿವಾಣದ, ಮುತ್ತಣ್ಣ ಚಟ್ಟೇರ,ಬಂದ್ರಿನಾಥ ಜೋಷಿ, ವಿಶ್ವನಾಥ ಕುಷ್ಟಗಿ, ಸೇರಿದಂತೆ ಮತ್ತಿತ್ತರರಿದ್ದರು.

Related