ಪಿಂಚಣಿ ಆದಾಲತ್ ಮೂಲಕ ಪರಿಹಾರ

  • In State
  • August 29, 2021
  • 389 Views
ಪಿಂಚಣಿ ಆದಾಲತ್ ಮೂಲಕ ಪರಿಹಾರ

ಕಮಲನಗರ : ತಾಲೂಕಿನ ದಾಬಕಾ ಗ್ರಾಮ ಹೋಬಳಿಯ ಸಾರ್ವಜನಿಕರ ಕುಂದುಕೊರತೆ ಅಲಿಸುವ ಕಾಯಕ್ರಮಕ್ಕೆ ತಹಶೀಲ್ದಾರ್ ಸೋಮಶೇಖರ ಶನಿವಾರ ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣ ವಲಯದ ವಿವಿಧ ಗ್ರಾಮಗಳ ಜನರ ಕುಂದುಕೊರತೆ ಇದ್ದಲಿ ನೇರವಾಗಿ ಪಿಂಚಣಿ ಅದಾಲತ್‌ಗೆ ಆಗಮಿಸಿ. ನಿಮ್ಮ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಮಾಡಲಾಗವುದು. ವಿವಿಧ ಗ್ರಾಮದ ಜನಸಾಮಾನ್ಯರು ದಾಬಕಾ ನಾಡ ಕಚೇರಿಗೆ ವಾಹನಗಳ ಕೊರತೆಯಿಂದ ಬರಲು ಸಾಧ್ಯವಾಗುತ್ತಿಲ್ಲ. ಆದ ಕಾರಣ ಜನಸಾಮಾನ್ಯರಿಗೆ ಅನುಕೂಲವಾಗಲು ಪಿಂಚಣಿ ಅದಾಲತ್ ಮೂಲಕ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡವುದು ಈ ಕಾರ್ಯಕ್ರಮದ ಉದ್ದೇಶ ಎಂದು ಹೇಳಿದರು.

ಕಂದಾಯ ನಿರೀಕ್ಷಕ ಸಂಜೀವ ರಾಥೋಡ್ ಮಾತನಾಡಿ, ದಾಬಕಾ ಹೋಬಳಿ ಕೇಂದ್ರದ ಸುತ್ತಲಿನ ಗ್ರಾಮಸ್ಥರು ಸಮಸ್ಯೆಗಳಿಗೆ ದಲಾಲಿಗಳನ್ನು ಭೇಟಿಯಾಗದೆ ನೇರವಾಗಿ ಕಚೇರಿಗೆ ಬಂದು ಸಂಬಂಧಿತ ಅಧಿಕಾರಿಗಳಿಗೆ ಭೇಟಿ ನೀಡಿ. ನಿಮ್ಮ ಸಮಸ್ಯೆಗಳಿಗೆ ಸ್ವಂದಿಸಿ ಪರಿಹಾರ ನೀಡಲಾಗುವುದು ಎಂದು ಜನರಿಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಮಾಜ ಸೇವಕ ಸಂತೋಷ ಜಾಧವ, ರೈತ ಮುಖಂಡ ಅಂಶುವ ವಾಡೇಕರ್, ಗ್ರಾಮ ಲೆಕ್ಕಿಗ ನರಸಿಂಹ, ಮಹೇಶ, ವಿಠ್ಠಲರಾವ್, ಮಂಜುನಾಥ ಕಂಪ್ಯೂಟರ್ ಆಪರೇಟರ್ ಸಂಜೀವ , ಕಿಶನ ವಾಡೇಕರ, ಸಂತೋಷ ರಾಥೋಡ್, ಕಿಶನ ಪಾಟೀಲ್, ರಾಜಕುಮಾರ್ ಬಿರಾದಾರ, ಚಂದ್ರಕಲಾ ಪಾಟೀಲ್, ಸಂಗೀತಾ ಭುಸಾಠೆ ಇನ್ನಿತರರಿದ್ದರು.

Related