ಬೆಂಗಳೂರು: ಮೈಸೂರು ಸ್ಯಾಟಲೈಟ್ ನಿಲ್ದಾಣ ದಿಂದ, ಬನಶಂಕರಿ.ಎಲೆಕ್ಟ್ರಾನಿಕ್ ಸಿಟಿ ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಬಿಟಿಎಂ ಲೇಔಟ್ ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ವಾಯುವಜ್ರ ಬಸ್ ಸಂಚಾರ ಸೇವೆಯಿರುತ್ತದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಮಹಾನಗರ ಸಾರಿಗೆ ಸಂಸ್ಥೆಯು ಬುಧವಾರದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ 23 ವಾಯುವಜ್ರ ಹವಾನಿಯಂತ್ರಿತ ಸಾರಿಗೆ ವಾಹನಗಳ ಕಾರ್ಯಾಚರಣೆಯನ್ನು 5 ಮಾರ್ಗಗಳಲ್ಲಿ ಆರಂಭಿಸಲಿದೆ.
ಸಾರಿಗೆ ವಾಹನಗಳ ಕಾರ್ಯಾಚರಣೆಯನ್ನು 5 ಮಾರ್ಗಗಳಲ್ಲಿ ಆರಂಭಿಸಲಿದೆ. ಸಾರ್ವಜನಿಕರು ಈ ಬಸ್ ಸಂಚಾರ ಸೇವೆಯನ್ನು ಬಳಸಿಕೊಳ್ಳುವಂತೆ ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.