“ಗ್ರಾಮೀಣ ಸಮಸ್ಯೆಗಳ ಇತ್ಯರ್ಥಕ್ಕೆ ಒಗ್ಗೂಡಿ “

“ಗ್ರಾಮೀಣ ಸಮಸ್ಯೆಗಳ ಇತ್ಯರ್ಥಕ್ಕೆ ಒಗ್ಗೂಡಿ “

ಕೊಡೇಕಲ್ : ಗ್ರಾಮೀಣ ಭಾಗದ ಸಮಸ್ಯೆಗಳ ಇತ್ಯರ್ಥಕ್ಕೆ ಎಲ್ಲರೂ ಒಗ್ಗೂಡುವ ಅವಶ್ಯಕತೆ ಇದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ್ಣ) ಹುಣಸಗಿ ತಾಲೂಕಿನ ಉಪಾಧ್ಯಕ್ಷ ದೇವರಾಜ ಪಾಟೀಲ ಹೇಳಿದರು. ತಾಲೂಕಿನ ಕೊಡೇಕಲ್ ಹೋಬಳಿ ಘಟಕದ ಕರವೇ ಕಾರ್ಯಾಲಯದಲ್ಲಿ ಯರಕಿಹಾಳ ಮತ್ತು ಕುರೇಕನಾಳ ಗ್ರಾಮ ಘಟಕಗಳ ರಚನಾ ಸಭೆಯಲ್ಲಿ ಗುರುವಾರ ಮಾತನಾಡಿದರು.
ಸಂಘಟನೆಗಳ ಪದಾಧಿಕಾರಿಗಳು ಕೇವಲ ಸಭೆ ಸಮಾರಂಭಗಳಿಗೆ ಸಿಮೀತ ಆಗಬಾರದು. ಗ್ರಾಮಗಳಲ್ಲಿ ನಡೆಯುವ ಎಲ್ಲಾ ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಬೇಕು. ಸಮಾಜಮುಖಿ ಮತ್ತು ನಾಡು ನುಡಿಯ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿ ಕೊಳ್ಳಬೇಕು ಎಂದರು.

ಕುರೇಕನಾಳ ಗ್ರಾಮ ಘಟಕದ ಪದಾಧಿಕಾರಿಗಳು ಪ್ರಭು ಹುಣಸಗಿ (ಗೌರವ ಅಧ್ಯಕ್ಷ) ಶಂಕರಗೌಡ ಮಾ. ಪಾಟೀಲ (ಅಧ್ಯಕ್ಷ) ಸಾಹೇಬಗೌಡ ಬಿರಾದಾರ, ರೇವಣಸಿದ್ದಪ್ಪ ಸಾಳಿ(ಉ.ಅಧ್ಯಕ್ಷ ರು) ಸೋಮನಗೌಡ ಹುಣಸಗಿ (ಕಾರ್ಯದರ್ಶಿ) ರೇವಣಸಿದ್ದಪ್ಪ ತೋಂಡಿಹಾಳ (ಸಂಚಾಲಕ) ಮಾಳಪ್ಪ ಡವಳಗಿ(ಖಜಾಂಚಿ) ಸೇರಿ 10 ಜನ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಯರಕಿಹಾಳ ಗ್ರಾಮ ಘಟಕದ ಪದಾಧಿಕಾರಿಗಳು ಅಂಬ್ರೇಶ (ಗೌರವಾಧ್ಯಕ್ಷ) ಯಮನಪ್ಪ ಹುಲ್ಲಿಕೇರಿ(ಅಧ್ಯಕ್ಷ) ನಿಂಗಪ್ಪ, ಶರಣಬಸವ ಬಿರಾದಾರ (ಉ.ಅಧ್ಯಕ್ಷ ರು) ಅಮರಪ್ಪ ಲಕ್ಕುಂಡಿ (ಕಾರ್ಯದರ್ಶಿ) ಚಂದಪ್ಪ ಕರಿಬಾವಿ(ಸಂಚಾಲಕ) ಬಸವರಾಜ ಹುಲ್ಲಿಕೇರಿ (ಖಜಾಂಚಿ) ಆಯ್ಕೆಯಾದರು.

ಈ ಸಂದರ್ಭದಲ್ಲಿ ಕರವೇ ಯ ಮುಖಂಡರಾದ ರಮೇಶ ಪೂಜಾರಿ, ಬಸವರಾಜ ದೊಡ್ಡಮನೆ, ಕಾಂತು ಮಾರನಾಳ, ಸಂಗು ಜಾಲಹಳ್ಳಿ ಮತ್ತು ಇತರರು ಇದ್ದರು.

Related