ಕಾಲೇಜಿಗೆ ಚಕ್ಕರ್ ಬಾರ್‌ನಲ್ಲಿ ಮಕ್ರ

ಕಾಲೇಜಿಗೆ ಚಕ್ಕರ್ ಬಾರ್‌ನಲ್ಲಿ ಮಕ್ರ

ಕೊಡಗು : ವಿದ್ಯಾರ್ಥಿಗಳು ಕೊರೋನಾ ಸಂಕಷ್ಟದ ನಂತರ ತಡವಾಗಿ ಆರಂಭವಾಗಿದ್ದರೂ, ಕಾಲೇಜಿಗೆ ಮಾತ್ರ ಹಾಜರಾಗುತ್ತಿರಲಿಲ್ಲ. ಆದ್ರೇ ಬಾರ್ ನಲ್ಲಿ ಮಾತ್ರ ಹಾಜರಾಗಿ, ಮೋಜು ಮಸ್ತಿ ಮಾಡ್ತಾ ಇದ್ದರಂತೆ. ಈ ವಿಷಯ ತಿಳಿದು ಪ್ರಾಂಶುಪಾಲರಾದಂತ ಫಾದರ್ ಬಾರ್ ಗೆ ದಿಢೀರ್ ಭೇಟಿ ನೀಡಿದ್ದಾರೆ.

ಸಿಕ್ಕಿಬಿದ್ದಂತ ವಿದ್ಯಾರ್ಥಿಗಳಿಗೆ ಕ್ಲಾಸ್ ತಗೊಂಡಿದ್ದಲ್ಲದೇ, ಅವರ ಪೋಷಕರನ್ನು ಕರೆಸಿ, ವಾರ್ನಿಂಗ್ ಮಾಡಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.ಬೆಳ್ಳಿಗ್ಗೆ 10 ಗಂಟೆಗೆ ಬಾರ್ ಗೆ ಹಾಜರಾಗಿ, ಮದ್ಯಪಾಲನ ಮಾಡುತ್ತಿದ್ದಂತ ವಿದ್ಯಾರ್ಥಿಗಳನ್ನು ಕಂಡ ಪ್ರಿನ್ಸಿಪಾಲ್, ಕೆಂಡಾಮಂಡಲರಾಗಿದ್ದಾರೆ.

ಆ ಬಳಿಕ ನಾಲ್ವರು ಪದವಿ ವಿದ್ಯಾರ್ಥಿಗಳ ಪೋಷಕರನ್ನು ಕರೆಸಿದಂತ ಅವರು, ಪೋಷಕರಿಗೆ ವಾರ್ನಿಂಗ್ ಮಾಡಿದ್ದಾರೆ. ಈ ಮೂಲಕ ಜಾಲಿ ಬಾರ್ ನಲ್ಲಿ ಸೇರಿದ್ದಂತ ಹುಡುಗರಿಗೆ ಪ್ರಿನ್ಸಿಪಾಲರು ಸಖತ್ ಬಿಸಿ ಮುಟ್ಟಿಸಿದ್ದಾರೆ.

Related