ಕಂತಿನ ಹಣ ಕದ್ದ ಕಲೆಕ್ಷನ್ ಎಕ್ಸಿಕ್ಯೂಟಿವ್

ಕಂತಿನ ಹಣ ಕದ್ದ ಕಲೆಕ್ಷನ್ ಎಕ್ಸಿಕ್ಯೂಟಿವ್

ಯಾದಗಿರಿ : ಉಂಡು ಹೋದ ಕೋಂಡು ಹೋದ ಎಂಬ ಗಾದೆಯಂತೆ ರೈತನ ಬಾಳಿನಲ್ಲಿ ಕತ್ತಲೆ ಮೂಡಿಸಿದ ಖಾಸಗಿ ಪೈನಾನ್ಸ್ ಕಂಪನಿ ಟ್ರಾಕ್ಟರ್ ಜಪ್ತಿಗೆ ರೈತ ಕಂಗಾಲಾಗಿದ್ದಾನೆ.

ಜಿಲ್ಲೆಯಲ್ಲಿ ಹಲವಾರು ರೈತರು ಖಾಸಗಿ ಫೈನಾನ್ಸ್ಗಳ ಮೂಲಕ ಸಾಲ ಪಡೆದುಕೊಂಡು ಕಂತಿನ ಮೂಲಕ ಹಣ ಪಾವತಿಸುತ್ತಾ ಕೃಷಿ ಸಾಮಾಗ್ರಿಗಳನ್ನು ಪಡೆದುಕೊಳ್ಳುತ್ತಾರೆ.

6 ತಿಂಗಳಿಗೊಮ್ಮೆ ಸುಲಭದ ಕಂತಿನಲ್ಲಿ ಹಣ ಪಡೆದುಕೊಳ್ಳುತ್ತಾರೆ. ಆದ್ರೆ ರೈತರು ಆಯಾ ಫೈನಾನ್ಸ್ ಕಂಪನಿಗಳಿಂದ ಬರುವ ಕಲೆಕ್ಷನ್ ಎಕ್ಸಿಕ್ಯೂಟಿವ್‌ಗೆ ಹಣ ಪಾವತಿಸುತ್ತಾರೆ. ಆದ್ರೆ ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಖಾಸಗಿ ಫೈನಾನ್ಸ್ಗಳ ಕಲೆಕ್ಷನ್ ಎಕ್ಸಿಕ್ಯೂಟಿವ್‌ಗಳು, ಕಂತಿನ ಹಣ ಫೈನಾನ್ಸ್ ಪಡೆದ ರೈತನ ಖಾತೆಗೆ ಜಮಾ ಮಾಡಿಕೊಳ್ಳದೇ ತಮ್ಮ ಖಾತೆಗೆ ಜಮಾ ಮಾಡಿಕೊಂಡು ಮತ್ತೆ ಅಲ್ಲಿಂದ ಕೆಲಸ ಬಿಟ್ಟು ಹೋಗುತ್ತಾರೆ.

ಇದರಿಂದ ಫೈನಾನ್ಸ್ ಪಡೆದ ರೈತನ ಗೋಳು ಕೇಳುವರಿಲ್ಲದೇ ಅವರು ಪಡೆದುಕೊಂಡ ಕೃಷಿ ಟ್ರಾಕ್ಟರ್  ಹಾಗೂ ವಾಹನಗಳನ್ನು ಜಪ್ತಿ ಮಾಡಿ ಹರಾಜು ಹಾಕುತ್ತಾರೆ. ಇದರಿಂದ ಯಾರೋದೋ ತಪ್ಪಿಗೆ ಇನ್ಯಾರಿಗೋ ಬರೆ ಎಂಬಂತಾಗಿದೆ.

ಸುರಪುರ ತಾಲೂಕಿನ ಕಿರದಳ್ಳಿ ಗ್ರಾಮದ ರೈತ ಬೀಮಪ್ಪ ತಂದೆ ಮಲ್ಲಪ್ಪ ಎಂಬ ರೈತ ಕಳೆದ 2 ವರ್ಷದ ಹಿಂದೆ ಶಹಾಪೂರ ನಗರದ ಚೋಳಮಂಡಲ ಕಂಪನಿಯಲ್ಲಿ ಟ್ರಾಕ್ಟರ್ ತೆಗೆದುಕೊಳ್ಳಲು ಸಾಲ ಪಡೆದುಕೊಂಡಿದ್ದ.

ಅದರಂತೆ ಸಮಯಕ್ಕೆ ಸರಿಯಾಗಿ ಕಂತನ್ನು ಸಂಗಯ್ಯ ಎಂಬ ಕಲೆಕ್ಷನ್ ಎಕ್ಸಿಕ್ಯೂಟಿವ್  ಕಾರ್ಯ ನಿರ್ವಹಿಸುತ್ತಿದ್ದ ಸಂಗಯ್ಯ ಎಂಬವರು ಕಂತು ಪಾವತಿಸಿಕೊಂಡು ರಶೀದಿ ನೀಡಿ ಎಂದರೆ ಖಾತೆಗೆ ಹಾಕಿದ ಮೇಲೆ ನೀಡುತ್ತೇನೆ. ಅನಕ್ಷರಸ್ಥ ರೈತರಿಗೆ ಹೇಳಿ ಕೊನೆಗೆ ಹಣ ಪಾವತಿಸಿಲ್ಲ ಇದರಿಂದ ಕಂಪನಿಯವರು ಟ್ರಾಕ್ಟರ್ ಜಪ್ತಿ ಮಾಡಿದ್ದಾರೆ.

ಫೈನಾನ್ಸ್ ಕಂಪನಿಯಿಂದ ನೋಟಿಸ್ ನೀಡಿ ಟ್ರಾಕ್ಟರ್ ತೆಗೆದುಕೊಂಡು ಹೋಗಿದ್ದಾರೆ. 6 ತಿಂಗಳು ಕಂತಿನಲ್ಲಿ 2 ಸಾರಿ ಅಂದರೆ ಸುಮಾರು 1.74 ಸಾವಿರ ಹಣ ಪಾವತಿಸಿದ್ದೇನೆ ಎಂದು ಹೇಳಿದರೂ ಕೇಳುತ್ತಿಲ್ಲ ಎಂದು ಸಿಬ್ಬಂದಿ ವಿರುದ್ದ ಕ್ರಮ ತೆಗೆದುಕೊಂಡು ನ್ಯಾಯ ನೀಡುವಂತೆ ಮನವಿ ಮಾಡಿದ್ದೇನೆ.

ಕೆಲ ಖಾಸಗಿ ಸಂಸ್ಥೆಗಳ ಬ್ಯಾಂಕ್‌ನವರಯ ಸಾಲ ಕೊಡುವ ಮೊದಲು ನಯವಾಗಿ ಮಾತನಾಡಿ ರೈತರ ಮುಗ್ಧತೆ ಉಪಯೋಗಿಸಿಕೊಂಡು ವಂಚನೆ ಮಾಡಿದ್ದಾರೆ. ಅಂಥವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು. ಅವರಿಂದಲೇ ಕಂತು ಪಾವತಿಸಿ ರೈತನಿಗೆ ಟ್ರಾಕ್ಟರ್ ಮರಳಿ ಕೊಡಬೇಕು. ಇಲ್ಲವಾದ್ರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.

Related