ಕಮಲದ ವಿರುದ್ಧ ಸಿಎಂ ವಾಗ್ದಾಳಿ

ಕಮಲದ ವಿರುದ್ಧ ಸಿಎಂ ವಾಗ್ದಾಳಿ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಸರ್ಕಾರವನ್ನು ಬಿಳಿಸಲು ಪ್ರಯತ್ನ ಮಾಡುತ್ತಿದೆ ಆದರೆ ಬಿಜೆಪಿ, ಜೆಡಿಎಸ್ ಏನೇ ಪ್ರಯತ್ನ ಮಾಡಿದರು ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಸಾಧ್ಯವಿಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಇನ್ನು ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಆಪರೇಷನ್ ಕಮಲ ಬಗ್ಗೆ ನನಗೆ ಗೊತ್ತಿಲ್ಲ, ರವಿ ಗಣಿಗ ಜತೆ ಮಾತನಾಡಿಲ್ಲ. ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನ ಆಗ್ತಿದೆ ಅಂತಾ ಮಾಹಿತಿ ಇತ್ತು. ಆದರೆ ಬಿಜೆಪಿಯವರಿಗೆ ಅದು ಸಾಧ್ಯವಿಲ್ಲ ಎಂದು ಹೇಳಿದರು.

ಬಿಜೆಪಿಯಿಂದ ಕಾಂಗ್ರೆಸ್​ ಶಾಸಕರಿಗೆ ಹಣದ ಆಫರ್​ ನೀಡಿದ್ದಾರೆಂಬ ವಿಚಾರವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಮಾತನಾಡಿ ಇದರ ಹಿಂದೆ ಭಾರಿ ಷಡ್ಯಂತ್ರ ನಡೆದಿದೆ, ಇದ್ಯಾವುದೂ ಫಲ ನೀಡಲ್ಲ. ಪ್ರತಿಯೊಬ್ಬರ ನಡೆ ಕೂಡ ನಮಗೆ ಗೊತ್ತಿದೆ. ಷಡ್ಯಂತ್ರ ನಡೆಸಲು ಕೆಲ ದೊಡ್ಡವರು ಕೂಡ ಪ್ರಯತ್ನ ಮಾಡುತ್ತಿದ್ದಾರೆ. ಅವರ ಯಾವ ಪ್ರಯತ್ನಗಳು ಫಲ ನೀಡಲ್ಲ ಎಂದರು.

 

Related