ಸಿಎಂ ಉಪಚುನಾವಣೆಗೆ ಮೀಸಲಾಗಬಾರದು

ಸಿಎಂ ಉಪಚುನಾವಣೆಗೆ ಮೀಸಲಾಗಬಾರದು

ಗಂಗಾವತಿ : ನಮ್ಮ ಕರ್ನಾಟಕ ಸರ್ಕಾರದ ಮುಖ್ಯ ಮಂತ್ರಿಗಳು, ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳೇ ಹೊರತು, ಉಪಚುನಾವಣೆಗಳಿಗೆ ಮಾತ್ರ ಮುಖ್ಯಮಂತ್ರಿಗಳಲ್ಲ, ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಕ್ಷೇತ್ರಗಳ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮರಾಠಿಗರ ಮತಗಳ ಮೇಲೆ ಕಣ್ಣಿಟ್ಟು, ಅವರ ಮೇಲೆ ಪ್ರಭಾವ ಬೀರಲು ಮರಾಠಿ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಮುಂದಾಗಿದರು.

ಖಂಡನೀಯ  ಕೊರೋನದ  ಇಂಥ  ಸಂಕಷ್ಟದ  ಸಮಯದಲ್ಲಿ  ರಾಜ್ಯದ  ಜನತೆಯ ಹಿತರಕ್ಷಣೆ ಮಾಡುವಲ್ಲಿ ವಾರಿಯರ್ಸ್ ಆಗಿ ಕೆಲಸ ಮಾಡಿದಂತ ಸರ್ಕಾರಿ ವೈದ್ಯರಿಗೆ, ಅಂಗನವಾಡಿ, ಆಶಾ, ಕಾರ್ಯಕರ್ತೆಯರಿಗೆ, ಪೌರ ನೌಕರರಿಗೆ, ಸಿಬ್ಬಂದಿಗಳಿಗೆ, ಸರ್ಕಾರಿ ಶಾಲೆಯ ಶಿಕ್ಷಕರಿಗೆ, ಗುತ್ತಿಗೆ- ಅರೆ ಗುತ್ತಿಗೆ ನೌಕರರಿಗೆ, ಸರ್ಕಾರಿ ಸಾರಿಗೆ ನೌಕರರಿಗೆ ಸಂಬಳ ನೀಡುವಲ್ಲಿ ಸರ್ಕಾರ ಸಂಪೂರ್ಣ ವಿಳಂಬ ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ, ಇಂಥವರ ಸಂಕಷ್ಟದಲ್ಲಿ ಸರ್ಕಾರ ನೆರವಾಗಿದೆ.

ಈ ರೀತಿ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಹಚ್ಚುವ ತಾರತಮ್ಯ ನೀತಿ ಅನುಸರಿಸಬಾರದು, ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನವನ್ನು ಸರ್ಕಾರ ಮೀಸಲಿಡಬೇಕು. ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ನಿರ್ದೇಶಕರು ಮತ್ತು ಕಾಂಗ್ರೆಸ್ ಮುಖಂಡರಾದ ವಿಶ್ವನಾಥ್ ಮಾಲಿಪಾಟೀಲ ತಿಳಿಸಿದರು.

Related