ದಳಪತಿಗಳ ವಿರುದ್ಧ ಕಾನೂನು‌ ಹೋರಾಟಕ್ಕೆ ಮುಂದಾದ CM ಇಬ್ರಾಹಿಂ!?

ದಳಪತಿಗಳ ವಿರುದ್ಧ ಕಾನೂನು‌ ಹೋರಾಟಕ್ಕೆ ಮುಂದಾದ CM ಇಬ್ರಾಹಿಂ!?

ಬೆಂಗಳೂರು: ನವೆಂಬರ್ 16ರಂದು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಹಿನ್ನೆಲೆ ಸಿಎಂ ಇಬ್ರಾಹಿಂ ಅವರನ್ನು ಪಕ್ಷದಿಂದ ಉಚ್ಚಾಟಿಸಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್​ಡಿ ದೇವೇಗೌಡರು ಆದೇಶ ಹೊರಡಿಸಿದ್ದಾರೆ.

ಪಕ್ಷದಿಂದ ಉಚ್ಚಾಟನೆ ಮಾಡಿರುವುದರಿಂದ ಸಿಎಂ ಇಬ್ರಾಹಿಂ ಅವರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

ಹೌದು, ಜೆಡಿಎಸ್​​ನಿಂದ ಉಚ್ಛಾಟನೆಯಾದ ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಇದೀಗ ಕೆರಳಿ ಕೆಂಡವಾಗಿದ್ದಾರೆ.  ಉಚ್ಚಾಟನೆ ಪ್ರಶ್ನಿಸಿ ದಳಪತಿಗಳ ವಿರುದ್ಧ ಕಾನೂನು‌ ಹೋರಾಟಕ್ಕೆ ಇಬ್ರಾಹಿಂ ಮುಂದಾಗಿದ್ದಾರೆ.  ಮುಂದಿನ ಕಾನೂನು ಹೋರಾಟದ ಬಗ್ಗೆ ಸಮಾನ ಮನಸ್ಕರ ಜೊತೆ ಚರ್ಚೆ ನಡೆಸಿರುವ ಸಿ.ಎಂ.ಇಬ್ರಾಹಿಂ, ಇಂದು ಮಹತ್ವದ ಸುದ್ದಿಗೋಷ್ಠಿ ಕರೆದಿದ್ದಾರೆ. ಅಷ್ಟೇ ಅಲ್ಲದೇ ಡಿಸೆಂಬರ್ 9ರಂದು ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯಲಿದ್ದು, ದೇವೇಗೌಡರ ವಿರುದ್ಧವೇ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ರಾಷ್ಟ್ರೀಯ ಉಪಾಧ್ಯಕ್ಷ ಸಿ.ಕೆ.ನಾಣು ದೇವೇಗೌಡರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

 

Related