ಸೈಕಲ್ ಯಾತ್ರೆಗೆ ಸಿಎಂ ಚಾಲನೆ

ಸೈಕಲ್ ಯಾತ್ರೆಗೆ ಸಿಎಂ ಚಾಲನೆ

ಬೆಂಗಳೂರು : ಕಾಶ್ಮೀರದಿಂದ  ಕನ್ಯಾಕುಮಾರಿಯವರೆಗೆ ಪ್ಯಾರಾ ಸೈಕ್ಲಿಂಗ್ ಮೂಲಕ ಆತ್ಮ ವಿಶ್ವಾಸ ತುಂಬುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ವಿಧಾನಸೌಧದ ಪೂರ್ವ ದ್ವಾರದ ಬಳಿ ಹಮ್ಮಿ ಕೊಂಡಿದ್ದ ಇನ್‌ಫಿನಿಟಿ 2020 ನಿ ಸಂಗ್ರಹಣೆ ಸೈಕಲ್ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಆತ್ಮವಿಶ್ವಾಸದಿಂದ ದೇಶದ ಉದ್ದಗಲಕ್ಕೂ ಸಂಚರಿಸಿ ಈ ಯಾತ್ರೆ ನಾವು ಯಾರಿಗೂ ಕಡಿಮೆ ಇಲ್ಲಎನ್ನುವ ಸಂದೇಶ ರವಾನೆ ಮಾಡುತ್ತಿದೆ.

ಗಡಿಯಲ್ಲಿ ದೇಶ ಕಾಯುವ ಯೋಧರಿಗೂ ಸಹ ಮಾನಸಿಕ ಸ್ಥೆರ್ಯ ತುಂಬುವ ಕೆಲಸ ಮಾಡಿ ರುವುದು ಮೆಚ್ಚುವಂತಹ ವಿಚಾರ. ಇವರ ಯಾತ್ರೆ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ ಎಂದು ನುಡಿದರು.

ಆದಿತ್ಯ ಮೆಹ್ತಾ ಫೌಂಡೇಶನ್ ಮತ್ತು ಬಾರ್ಡರ್ ಸೆಕ್ಯುರಿಟಿ ಫೋರ್ಸ್ ಸಹಯೋಗದಲ್ಲಿ ವಿಶೇಷ ಚೇತನ ಪ್ರತಿಭೆಗಳಿಗೆ ಉತ್ತೇಜಿಸಲು ನಿ ಸಂಗ್ರಹಿಸುವ ಸಲುವಾಗಿ ಈ ಸೈಕಲ್ ಜಾಥಾ ನಿ ಸಂಗ್ರಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ನಡೆಯುತ್ತಿರುವ ಈ ಯಾತ್ರೆ 43 ದಿನಗಳ ಕಾಲ 35 ನಗರಗಳಲ್ಲಿ ಸಂಚರಿಸಲಿದೆ.

Related