ಮಕ್ಕಳಾದ ಬಳಿಕ ಮಹಿಳೆ ಕ್ರೀಡೆಗೆ

ಮಕ್ಕಳಾದ ಬಳಿಕ ಮಹಿಳೆ ಕ್ರೀಡೆಗೆ

ಮೈಸೂರು, ಫೆ. 25 : ಮದುವೆಯಾಗಿ ಮಕ್ಕಳಾದ ಮೇಲೆ ಹೆಂಗಸರ ಜೀವನ ಮುಗೀತು, ಮನೆ, ಸಂಸಾರ ಎಂದು ನೋಡಿಕೊಳ್ಳುವುದರಲ್ಲಿ ಅವರ ಜೀವನ ಕಳೆಯುತ್ತದೆ, ಇನ್ನು ತಮ್ಮ ಪ್ರತಿಭೆ, ಆಸಕ್ತಿಗಳನ್ನು ತೋರಿಸಿಕೊಳ್ಳಲು ಅವರಿಗೆಲ್ಲಿದೆ ಅವಕಾಶ ಎಂಬ ಅಭಿಪ್ರಾಯಗಳೇ ಹೆಚ್ಚು.
ಮೈಸೂರಿನ ಅಶೋಕಪುರಂನ 35 ವರ್ಷದ ಲಕ್ಷ್ಮಿ ಇದಕ್ಕೆ ಅಪವಾದ. ಅವರು ಶಾಲಾ, ಕಾಲೇಜು ದಿನಗಳಲ್ಲಿ ಖೊ-ಖೊ ಪಂದ್ಯದಲ್ಲಿ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿದವರು. ಆದರೆ ಪಿಯುಸಿ ಮುಗಿಯುವುದರೊಳಗೆ ಮನೆಯವರು ಮದುವೆ ಮಾಡಿದ್ದರಿಂದ ಓದು ಮತ್ತು ಕ್ರೀಡೆಯನ್ನು ಅರ್ಧಕ್ಕೆ ನಿಲ್ಲಿಸಿ ಗಂಡನ ಮನೆ ಸೇರಿದರು.

ಅದಾಗಿ 16 ವರ್ಷ ಕಳೆದಿದೆ. ಇಬ್ಬರು ಗಂಡು ಮಕ್ಕಳಾದರು..

Related