ಬಾಲಕ ಆತ್ಮಹತ್ಯೆ

ಬಾಲಕ ಆತ್ಮಹತ್ಯೆ

ಬೆಳಗಾವಿ,ಫೆ. 12 : ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ತಾಲೂಕಿನ ಬಸೂರ್ತೆ ಗ್ರಾಮದಲ್ಲಿ ನಡೆದಿದೆ. ಜಾಕೆಟ್ ಕೊಡಿಸುವಲ್ಲಿ ವಿಳಂಬ ಮಾಡಿದ್ದಕ್ಕೆ ಶುಭಂ ಗಜಾನನ ಹನ್ನೂರಕರ(15) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಬಸೂರ್ತೆ ಗ್ರಾಮದವನಾಗಿರುವ ಶುಭಂ ತನ್ನ ತಂದೆಗೆ ಹೊಸ ಜಾಕೆಟ್ ಕೊಡುವಂತೆ ಹೇಳಿದ್ದಾನೆ. ಶುಭಂ ಮನೆಯಲ್ಲಿ ನನಗೆ ಈಗಲೇಬೇಕು ಎಂದು ಹಠ ಹಿಡಿದಿದ್ದನು. ಈ ಕಾರಣದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related