ಮೈದಾನ ಉಳಿವಿಗೆ ಚಾಮರಾಜಪೇಟೆ ಬಂದ್

ಮೈದಾನ ಉಳಿವಿಗೆ ಚಾಮರಾಜಪೇಟೆ ಬಂದ್

ಬೆಂಗಳೂರು, ಜು 11 : ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಬಂದ್‌ಗೆ ಸಾರ್ವಜನಿಕರು ಸೇರಿದಂತೆ ಚಾಮರಾಜಪೇಟೆ ನಾಗರಿಕರ ಒಕ್ಕೂಟದ ವೇದಿಕೆ ಕರೆ ನೀಡಿದೆ. ಚಾಮರಾಜಪೇಟೆ 7ನೇ ಕ್ರಾಸ್‌ನಲ್ಲಿರುವ ಆಟದ ಮೈದಾನ ಬಿಬಿಎಂಪಿ ಸ್ವತ್ತಾಗಿ ಉಳಿಸಿಕೊಳ್ಳಲು ಒತ್ತಾಯಿಸಿ ಜು.೧೨ರಂದು ಬೆಳಗ್ಗೆ ೮ ಗಂಟೆಯಿಂ ಸಂಜೆ ೫ ಗಂಟೆವರೆಗೆ ಶಾಂತಿಯುತ ಬಂದ್‌ಗೆ ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆ ಕರೆ ನೀಡಿದೆ.

ಈ ಮೈದಾನವನ್ನ ಎಲ್ಲರೂ ಉಪಯೋಗಿಸುವಂತೆ ಮಾಡಲು ಬಿಬಿಎಂಪಿ ಕಾರ್ಯಗತ ಮಾಡಬೇಕಿತ್ತು. ಆದರೆ ವಕ್ಫ್ ಬೋರ್ಡ್ಗೆ ಖಾತೆ ಮಾಡಿಕೊಡಲು ಬಿಬಿಎಂಪಿ ಆಸಕ್ತಿ ತೋರುತ್ತಿದೆ. ಒಂದು ಸಮುದಾಯವನ್ನ ಓಲೈಕೆ ಮಾಡುವ ಕೆಲಸ ಆಗುತ್ತಿದೆ. ಸ್ಥಳೀಯ ಶಾಸಕರಿಗೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲ. ಹಾಗಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಬಂದ್‌ಗೆ ಕರೆ ನೀಡಲಾಗಿದೆ. ಮಗಳವಾರ ಪ್ರತಿಭಟನೆ, ರ‍್ಯಾಲಿ ಮಾಡುವುದಿಲ್ಲ. ಸ್ವಯಂ ಪ್ರೇರಿತ ಬಂದ್‌ಗೆ ಕರೆ ನೀಡಿರುವ ಒಕ್ಕೂಟ, ಕ್ಷೇತ್ರದ ಬ್ಯಾಂಕ್, ಶಾಲಾ-ಕಾಲೇಜುಗಳ ಬಂದ್‌ಗೂ ಮನವಿ ಮಾಡಿದೆ.

ಆಟದ ಮೈದಾನಕ್ಕೆ ಜಯಚಾಮರಾಜೇಂದ್ರ ಒಡೆಯರ್ ಹೆಸರು ಇಡುವುದು, ಯಾವುದೇ ಕಾರಣಕ್ಕೂ ವಕ್ಫ್ ಮಂಡಳಿಗೆ ನೀಡದೆ ಪೂರ್ಣ ಸ್ವತ್ತು ಬಿಬಿಎಂಪಿಗೆ ಸ್ವತ್ತಾಗಿಯೇ ಉಳಿಯುವುದು, ಶಾಶ್ವತವಾಗಿ ಮಕ್ಕಳ ಆಟದ ಮೈದಾನವಾಗಿರುವುದು, ಸ್ವಾತಂತ್ರ‍್ಯ ದಿನಾಚರಣೆ, ಗಣೇಶೋತ್ಸವ, ನಾಡಹಬ್ಬ ದಸರಾ, ಶಿವರಾತ್ರಿ ಸೇರಿ ಇತರೆ ಸಮಾರಂಭ ನಡೆಸುವುದಕ್ಕೆ ಅನುಮತಿ ನೀಡುವುದು ಸೇರಿ ಇನ್ನಿತರ ಸಮಸ್ಯೆಗಳ ಈಡೇರಿಕೆಗಾಗಿ ಹಮ್ಮಿಕೊಂಡಿರುವ ಬಂದ್‌ಗೆ ಚಾಮರಾಜಪೇಟೆ ಬಡಾವಣೆ ಜನರು ಸಹಕಾರ ನೀಡಬೇಕೆಂದು ಒಕ್ಕೂಟ ಮನವಿ ಮಾಡಿದೆ.

Related