ಚಾಲಾಕಿ ಕದೀಮರು

ಚಾಲಾಕಿ ಕದೀಮರು

ಮರಿಯಮ್ಮನಹಳ್ಳಿ: ಸಾಮಾನ್ಯವಾಗಿ ಕಳ್ಳರು ಹಣ ಒಡವೆ ಇನ್ನಿತರ ವಸ್ತುಗಳನ್ನು ಕಳ್ಳತನ ಮಾಡುತ್ತಾರೆ. ಆದರೆ ಚಾಲಾಕಿ ಕದೀಮರು ಮರಿಯಮ್ಮನಹಳ್ಳಿ ನಗರದಲ್ಲಿ ಸಾರ್ವಜನಿಕರ ಸರ್ಕಾರಿ ಬಸ್ ಕಳ್ಳತನ ಮಾಡಲು ಪ್ರಯತ್ನಿಸಿದ್ದಾರೆ.

ಹೌದು, ಪಟ್ಟಣದ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಆಳ್ಟಿಂಗ್ ಆಗಿದ್ದ ಕೆ ಎಸ್ ಆರ್ ಟಿ ಸಿ ಬಸ್ ಕಳ್ಳತನ ನಡೆದಿದ್ದು ಬೆಳಕಿಗೆ ಬಂದಿದೆ. ಬಸ್ಸನ್ನೂ ಬಿಡದ ಕಳ್ಳರು ಕೈಚಳಕ ತೋರಿದ್ದಾರೆ. ಇದೊಂದು ವಿಶಿಷ್ಟ ಕಳ್ಳತನ ಪ್ರಕರಣವಾಗಿದ್ದು, ಸಾರ್ವಜನಿಕರಲ್ಲಿ ನಗೆ ಪಾಟೀಲಿನ ವಿಷಯವಾಗಿ ಕೇಳಿಬಂದಿತು.

ಪ್ರತಿದಿನ ಮರಿಯಮ್ಮನಹಳ್ಳಿ ಬಸ್ ನಿಲ್ದಾಣದಲ್ಲಿ ಆಳ್ಟಿಂಗ್ ಆಗಿ ಬೆಳೆಗ್ಗೆ ಗರಗ, ಪೋತಲಕಟ್ಟೆ, ಯಶವಂತ ನಗರ, ಸಂಡೂರಿಗೆ ಪ್ರತಿದಿನ ಸಂಚಾರ ನಡೆಸುತ್ತಿದ್ದ ನಂ. ಕೆ ಎ 35 ಎಫ್ 85 ಬಸ್ ಪುನಃ ರಾತ್ರಿ 7:30ರ ಸುಮಾರಿಗೆ ಮರಿಯಮ್ಮನಹಳ್ಳಿ ಬಸ್ ನಿಲ್ದಾಣದಲ್ಲಿ ಆಳ್ಟಿಂಗ್ ಆಗಿದೆ, ಅದೇಕೋ ಕಧೀಮರ ಕಣ್ಣು ಬಸ್ಸಿನ ಮೇಲೆ ಬಿದ್ದಿದೆ. ಬಸ್ಸನ್ನು ತೆಗೆದುಕೊಂಡು ಅದೇನು ಮಾಡಲು ಹೊರಟಿದ್ದರೋ ತಿಳಿಯದಾಗಿದೆ. ರಾತ್ರಿ 11:00ರ ಸುಮಾರಿನಿಂದ ಬೆಳೆಗ್ಗೆ 05:00ಗಂಟೆಯ ಸುಮಾರಿನಲ್ಲಿ ಬಸ್ ನಿಲ್ದಾಣದಿಂದ, ಬಸ್ಸನ್ನು ಕಳ್ಳತನದಿಂದ ಚಲಾಯಿಸಿಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಸುಮಾರು 10ಲಕ್ಷ ಬೆಲೆಬಾಳುವ ಬಸ್ಸು ಇದಾಗಿದೆ ಎಂದು ಅಂದಾಜಿಸಲಾಗಿದೆ.

ಬಸ್ ಚಲಾಯಿಸಿಕೊಂಡು ಹೋದ ಖಧೀಮರು ಪಟ್ಟಣದ ಠಾಣಾವ್ಯಾಪ್ತಿಯ ಮಗಿಮಾವಿನಹಳ್ಳಿ ಕ್ರಾಸ್ನ ರಸ್ತೆಯ ಪಕ್ಕದಲ್ಲಿ ತುಂಬಾ ಹೊತ್ತು ನಿಂತಿದ್ದರಿಂದ ಸಾರ್ವಜನಿಕರಿಗೆ ಅನುಮಾನ ವ್ಯಕ್ತವಾಗಿದೆ, ಆಗ ಅಲ್ಲೇ ಇದ್ದ ಕೆಲವರು ಗಮನಿಸಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ ಎನ್ನಲಾಗಿದೆ.  ನಂತರ ಪೊಲೀಸರು ಬಸ್ಸನ್ನು ಠಾಣೆಗೆ ತಂದು, ಬಸ್ ಚಾಲಕ ಮತ್ತು ನಿರ್ವಹಕ ನೀಡಿದ ದುರಿನ ಅನ್ವಯ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವರದಿ ಮಂಜುನಾಥ ಲಕ್ಕಿಮರ (ವಿಜಯನಗರ )

Related