ಚಹಾಲ್ ಸಖತ್ ಸ್ಟೆಪ್ಸ್

ನವದೆಹಲಿ, ಫೆ. 24 : ತಮ್ಮ ಟಿಕ್ಟಾಕ್ ಖಾತೆಯಲ್ಲಿ ಚಹಾಲ್ ವಿಡಿಯೋ ಶೇರ್ ಮಾಡಿಕೊಂಡಿದ್ದು, ವಿಡಿಯೋದಲ್ಲಿ ಬ್ರಿಟೀಷ್ ಏಷ್ಯನ್ ನಟಿ ರಮೀತ್ ಸಂಧು ಮತ್ತು ಮಾಡೆಲ್ ಎಲಿಕ್ಸಿರ್ ನಹಾರ್ ಜತೆ ಚಹಾಲ್ ಬಿಂದಾಸ್ ಹೆಜ್ಜೆ ಹಾಕಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾವಿರಾರು ಲೈಕ್ಸ್ಗಳನ್ನು ಗಿಟ್ಟಿಸಿಕೊಂಡಿದೆ.
ಚಹಾಲ್ ಈ ಮುಂಚೆ ತನ್ನ ಸಹ ಆಟಗಾರರೊಂದಿಗೆ ಡ್ಯಾನ್ಸ್ ಮಾಡಿದ್ದ ವಿಡಿಯೋವನ್ನು ತಮ್ಮ ಟಿಕ್ಟಾಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಅದನ್ನು ಕೂಡ 33 ಮಿಲಿಯನ್ ಮಂದಿ ವೀಕ್ಷಣೆ ಮಾಡಿದ್ದರು.

Related