ಠಾಣಾಕುಶನೂರ ಪಿಎಚ್‌ಸಿಗೆ ಪ್ರಮಾಣ ಪತ್ರ

ಠಾಣಾಕುಶನೂರ ಪಿಎಚ್‌ಸಿಗೆ ಪ್ರಮಾಣ ಪತ್ರ

ಕಮಲನಗರ : ಬೀದರ್ ಜಿಲ್ಲಾಡಳಿತದ ವತಿಯಿಂದ ಠಾಣಾಕುಶನೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈಧ್ಯಧಿಕಾರಿ ಡಾ. ಫೈಜಲ ಅವರಿಗೆ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಸನ್ಮಾನಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನೈರ್ಮಲ್ಯ, ವಿಭಾಗಗಳಲ್ಲಿ ಮೌಲ್ಯಮಾಪನ ನಡೆಸಿ ರಾಷ್ಟçಮಟದಲ್ಲಿ ನೀಡಲಾಗುವ ಪ್ರಮಾಣ ಪತ್ರ ಬೀದರ್ ಜಿಲ್ಲೆಯ ಮೂರು ಪಿಎಚ್‌ಸಿಗಳಿಗೆ ಲಭಿಸಿದೆ. ತಾಲ್ಲೂಕಿನ ಠಾಣಾಕುಶನೂರ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಮಾಣ ಪತ್ರ ಪಡೆದಿದೆ.
ಸ್ವಚ್ಛತೆ, ಸೇವೆ, ಬೆಂಬಲ, ಕ್ಲಿನಿಕಲ್, ಸೋಂಕು ನಿಯಂತ್ರಣ, ನಿರ್ವಹಣೆ, ಸಮಗ್ರ ಫಲಿತಾಂಶ ಪರಿಶೀಲಿಸಲಾಗಿತ್ತು. ಇಲಾಖೆಯ ಮಾನದಂಡಗಳ ಅಡಿಯಲ್ಲಿ ಸೇವೆಗಳನ್ನು ಅಚ್ಚುಕಟ್ಟಾಗಿ ಒದಗಿಸಲಾಗಿದೆಯೇ ಎನ್ನುವುದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು. ಮೌಲ್ಯಮಾಪನದ ಮೂಲಕ ಅಂಕ ನೀಡಲಾಗಿತು.್ತ ಶೇ.70 ಅಂಕ ಪಡೆದ ಪಿಎಚ್‌ಸಿಗಳಿಗೆ ಪ್ರಮಾಣಪತ್ರಕ್ಕೆ ಪರಿಗಣಿಸಲಾಗಿದೆ. ಮೊದಲ ಹಂತದಲ್ಲಿ ಪಿಎಚ್‌ಸಿಗಳ ಆಂತರಿಕ ಮೌಲ್ಯಮಾಪನ ಮಾಡಿ ವರದಿ ಕೊಟ್ಟಿದ್ದವು. ನಂತರ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಮೌಲ್ಯಮಾಪನ ನಡೆಸಿದರು. ಒಟ್ಟು ನಾಲ್ಕು ಹಂತಗಳಲ್ಲಿ ಮೌಲ್ಯಮಾಪನ ಮಾಡಲಾಗಿತ್ತು. ಕೋವಿಡ್ ತಡೆಗಟ್ಟುವ ಕಾರ್ಯದ ಹೊರತಾಗಿಯು ಜಿಲ್ಲೆಯ ಠಾಣಾಕುಶನೂರ ಸೇರಿ ಎರಡು ಆರೋಗ್ಯ ಸಂಸ್ಥೆಗಳು ಗುಣಮಟ್ಟದ ಪ್ರಮಾಣಪತ್ರ ಪಡೆದಿರುವುದು ದೊಡ್ಡ ಸಾಧನೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ಜಿಲ್ಲೆಯ ಇನ್ನೂಳಿದ ಆರೋಗ್ಯ ಸಂಸ್ಥೆಗಳು ಸಹ ಉತ್ತಮವಾಗಿ ಕಾರ್ಯನಿರ್ವಸುವ ಮೂಲಕ ಆರೋಗ್ಯ ಇಲಾಖೆ ಜಿಲ್ಲೆಯ ಘನತೆ ಹೆಚ್ಚಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ. ಫೈಜಲ, ಡಾ. ಗಾಯತ್ರಿ ಧನ್ನುರಾ, ಡಾ. ದೇವಕಿ, ಡಾ. ವಿ ಜಿ ರೆಡ್ಡಿ, ಡಾ. ಕೃಷ್ಣರೆಡ್ಡಿ, ಡಾ. ಶಿವಶಂಕರ, ಜಹೀರಾ ನಸಿಮ ಹಾಗೂ ಶರಣಯ್ಯ ಸ್ವಾಮಿ, ಇನ್ನಿತರರಿದ್ದರು.

Related