ಗಡಿಯಲ್ಲಿ ಭುಗಿಲೆದ್ಧ ಕಾವೇರಿ ಕಿಚ್ಚು..!

ಗಡಿಯಲ್ಲಿ ಭುಗಿಲೆದ್ಧ ಕಾವೇರಿ ಕಿಚ್ಚು..!

ಬೆಂಗಳೂರು,ಸೆ.29: ದಿನೆ-ದಿನೆ ರಾಜ್ಯದಲ್ಲಿ ಕಾವೇರಿ ಕೂಗು ಹೆಚ್ಚಾಗಿದ್ದು, ನಿರಂತರ ರಾಜ್ಯ ಸರ್ಕಾರ ಮತ್ತು ತ.ನಾಡಿನ ವಿರುದ್ದ ಹಲವು ರೈತ ಸಂಘಟನೆಗಳು ಮತ್ತು ಕನ್ನಡ ಪರ ಸಂಘಟನೆಗಳು ಕಾವೇರಿ ನಮ್ಮದು ಎಂದು ಕಾವೇರಿ ಉಳಿವಿಗಾಗಿ ಹೋರಾಟ ನಡೆಸುತ್ತಿದ್ದು, ರಾಜ್ಯದ ನಡೆಯನ್ನು ಖಂಡಿಸಿ ಇಂದು ಅಖಂಡ ಕರ್ನಾಟಕ ಬಂದ್‌ ಕರೆ ನೀಡಿರುವ ಹಿನ್ನೆಲೆ ರಾಜ್ಯಾದ್ಯಂತ ಹೋರಾಟ ಜೋರಾಗೆ ಇದೆ.

ಅದೇ ರೀತಿ ಕರ್ನಾಟಕದ ಗಡಿಯಾಗಿರುವ ಅತ್ತಿಬೆಲೆಯಲ್ಲಿಯೂ ಸಹ ಕಾವೇರಿ ಕಿಚ್ಚು ಜೋರಾಗಿದ್ದು, ಟೊಲ್ ಗೇಟ್ ನಿಂದ ಗಡಿ ಗೋಪುರದವರೆಗೂ ಪ್ರತಿಭಟನಾ ಮೆರವಣಿಗೆಯೊಂದಿಗೆ ಕರವೇ, ಕಜಾವೇ , ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಭಾಗಿಯಾಗಿ ತಮಿಳುನಾಡು ವಿರುದ್ದ ಧಿಕ್ಕಾರ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.ಅತ್ತಿಬೆಲೆ ಗಡಿ ಹೆದ್ದಾರಿ
ಹೆದ್ದಾರಿ ಬಂದ್ ಮಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಬಂದ್ ಮಾಡಿ ಆಕ್ರೋಶ ಹೊರ ಹಾಕುತ್ತಿರುವ ಪ್ರತಿಭಟನಾಕಾರರು. ಈ ವೇಳೆ ವಿಭಿನ್ನವಾಗಿ ಶಾಲಾ ಮಕ್ಕಳಿಂದ ನೃತ್ಯದ ಮೂಲಕ ಪ್ರತಿಭಟಿಸಲು ಬಂದಿದ್ದ ವಿದ್ಯಾರ್ಥಿಗಳನ್ನ ವಾಪಸ್ಸು ಕಳುಹಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Related