ನಟಿ ಶರ್ಮಿಳಾ ಮಾಂಡ್ರೆ ವಿರುದ್ಧ ಕೇಸ್

ನಟಿ ಶರ್ಮಿಳಾ ಮಾಂಡ್ರೆ ವಿರುದ್ಧ ಕೇಸ್

ಬೆಂಗಳೂರು, ಏ. 04: . ಲಾಕ್ ಡೌನ್ ಇದ್ದರೂ ಸಹ ತಡರಾತ್ರಿ ಕಾರ್ ಚಾಲನೆ ಮಾಡಿಕೊಂಡು ಜಾಲಿ ರೈಡ್ ಗೆ ಹೋಗುತ್ತಿದ್ದ ಬೆಂಗಳೂರಿನಲ್ಲಿ ನಟಿ ಶರ್ಮಿಳಾ ಮಾಂಡ್ರೆ ಕಾರ್ ಅಪಘಾತಕ್ಕೀಡಾಗಿದೆ. ಅಪಘಾತದಿಂದಾಗಿ ಶರ್ಮಿಳಾ ಮಾಂಡ್ರೆ ಅವರ ಕೈ, ಮುಖಕ್ಕೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಹೈಗ್ರೌಂಡ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಶರ್ಮಿಳಾ ಮಾಂಡ್ರೆ ಅವರೇ ಕಾರ್ ಚಾಲನೆ ಮಾಡುತ್ತಿದ್ದರೆ? ಇಲ್ಲವೇ ಎನ್ನುವುದು ತನಿಖೆಯಲ್ಲಿ ಗೊತ್ತಾಗಲಿದೆ. ಲಾಕ್ ಡೌನ್ ನಿಯಮ ಉಲ್ಲಂಘಿಸಿ ಜಾಲಿ ರೈಡ್ ಗೆ ಹೋಗಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಶರ್ಮಿಳಾ ಮಾಂಡ್ರೆ ಮತ್ತು ಲೋಕೇಶ್ ಪ್ರಯಾಣಿಸುತ್ತಿದ್ದ ಕಾರ್ ನಲ್ಲಿ ತುರ್ತು ಸೇವೆಗಾಗಿ ಪಡೆದಿದ್ದ ಪಾಸ್ ಇತ್ತು ಎನ್ನಲಾಗಿದ್ದು, ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ.

Related