ಹೃದಯ ಸಂಬಂಧಿ ಕಾಯಿಲೆ ಯುವಕರು ಮಧ್ಯ ವಯಸ್ಕರನ್ನು ಬಾಧಿಸುತ್ತಿದೆ

ಹೃದಯ ಸಂಬಂಧಿ ಕಾಯಿಲೆ ಯುವಕರು ಮಧ್ಯ ವಯಸ್ಕರನ್ನು ಬಾಧಿಸುತ್ತಿದೆ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಹೃದಯ ಸಂಬಂಧಿ ಕಾಯಿಲೆಗಳಿಂದ ಯುವಕರು ಮಧ್ಯ ವಯಸ್ಕರರು ಹೆಚ್ಚಾಗಿ 45 ವರ್ಷದ ಒಳಗಿನ ವ್ಯಕ್ತಿಗಳು ಕಾಯಿಲೆಗಳಿಂದ ಸಾವಿಗೀಡಾಗುತ್ತಿದ್ದಾರೆ, ಎಂದು ಹೃದ್ರೋಗ ತಜ್ಞರು ಮತ್ತು
ಜಯದೇವ ಆಸ್ಪತ್ರೆ ನಿರ್ದೇಶಕರಾದ ಡಾ. ಮಂಜುನಾಥ್ ಹೇಳಿದರು.
ಅತ್ತಿಬೆಲೆ ಬಳಿಯ ಆಕ್ಸ್ಫರ್ಡ್ ವೈದ್ಯಕೀಯ ಕಾಲೇಜು ವತಿಯಿಂದ ಗುರುವಾರದಂದು ಹಮ್ಮಿಕೊಳ್ಳಲಾಗಿದ್ದ ಗ್ರಾಜುಯೇಷನ್ ಡೇ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಹೃದಯ ಸಂಬಂಧಿತ ಕಾಯಿಲೆಗಳಿಗೆ ಮುಖ್ಯವಾಗಿ ವಾಯು ಮಾಲಿನ್ಯವೂ ಕೂಡ ಕಾರಣವಾಗಿದೆ ಅದಲ್ಲದೆ ಬೆಂಗಳೂರಿನ ಜನ ಇದರಿಂದ ಜಾಸ್ತಿ ತುತ್ತಾಗುತ್ತಿದ್ದು ಬೆಂಗಳೂರಿನ ವಾಯು ಮಾಲಿನ್ಯದಿಂದ ಹೃದಯ ಸಂಬಂಧಿತ ಕಾಯಿಲೆಗಳು ಉಲ್ಬಣಗೊಂಡಿದೆ.

ಪ್ರಸ್ತುತ ದಿನಗಳಲ್ಲಿ ನಾವು ಎಷ್ಟು ವೈದ್ಯರನ್ನು ಹುಟ್ಟು ಹಾಕುತ್ತಿದ್ದೇವೆ ಎಂಬುದು ವಿಚಾರವಲ್ಲ ಆದರೆ ಎಷ್ಟು ಗುಣಮಟ್ಟದ ವೈದ್ಯರನ್ನು ಹುಟ್ಟು ಹಾಕುತ್ತಿದ್ದೇವೆ ಎಂಬುದು ಮುಖ್ಯವಾದದ್ದು.

ಹೃದಯ ಸಂಬಂಧಿತ ಕಾಯಿಲೆಗಳು ಕೇವಲ ಶ್ವಾಸಕೋಶಕ್ಕೆ ಅಲ್ಲದೆ ಬೇರೆ ಕಾಯಿಲೆಗಳಿಂದನು ಹೃದಯ ಸಂಬಂಧಿ ಸಾವಿಗೀಡಾಗುತ್ತಿದ್ದಾರೆ. ಇದಲ್ಲದೆ ಕೋವಿಡ್ ನಂತರದಲ್ಲಿ ಲಸಿಕೆ ತೆಗೆದುಕೊಂಡವರಲ್ಲಿ ಈ ಹೃದಯ ಸಂಬಂಧಿತ ಕಾಯಿಲೆಗಳು ಜಾಸ್ತಿ ಕಾಣಿಸುತ್ತಿವೆ ಎಂಬ ಪ್ರಶ್ನೆ ಬಂದಾಗ ಮಂಜುನಾಥ್ ರವರು ಇಲ್ಲ ಈ ಮಾಹಿತಿ ತಪ್ಪು, ವ್ಯಾಕ್ಸಿನ್ ಪಡೆದ 10 ಲಕ್ಷ ಜನರಲ್ಲಿ ಕೇವಲ ನಾಲ್ಕು ಜನರಲ್ಲಿ ಮಾತ್ರ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದು ಲಸಿಕೆ ಪಡೆದ ಯಾವುದೇ ವ್ಯಕ್ತಿಯು ಹೃದಯ ಸಂಬಂಧಿತ ಕಾಯಿಲೆಗೆ ಒಳಗಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಹಾಗೆ ಮಾತನಾಡುತ್ತಾ ಮನುಷ್ಯ ಆರೋಗ್ಯವಾಗಿರಲು ದಿನನಿತ್ಯ ವ್ಯಾಯಾಮ ಹಸಿರು ತರಕಾರಿ ಯೋಗ ಮುಂತಾದ ಚಟುವಟಿಕೆಗಳನ್ನು ಮಾಡುತ್ತಿರಬೇಕು ಎಂದು ತಿಳಿಸಿದರು
ಹೃದಯ ಸಂಬಂಧಿತ ಕಾಯಿಲೆಗಳು ಬರುತ್ತಿರುವ ಮೂಲ ಕಾರಣಗಳೆಂದರೆ ಮನುಷ್ಯನಲ್ಲಿ ಆಗುತ್ತಿರುವ ಅತಿ ಒತ್ತಡ ನಿದ್ರಾಹೀನತೆ ಜೀವನಶೈಲಿಯಲ್ಲಿ ಬದಲಾವಣೆ ಕಲುಷಿತ ಗಾಳಿ ನೀರು ಕಲುಷಿತ ಆಹಾರ ಪದಾರ್ಥಗಳಿಂದ ಮನುಷ್ಯ ನಾನಾ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಲವಾರು ವಿದ್ಯಾರ್ಥಿಗಳು ಎಂಡಿ ಮತ್ತು ಎಂಎಸ್‌ಡಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಸರ್ಟಿಫಿಕೆಟ್ ಪ್ರಧಾನ ಮಾಡಲಾಯಿತು. ಇಂದು ನಮ್ಮ ರಾಜ್ಯದಲ್ಲಿದೆ ಹಾಗೂ ದೇಶದಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಚಿಕಿತ್ಸಾ ವ್ಯವಸ್ಥೆ ತುಂಬಾ ಚೆನ್ನಾಗಿ ಮುಂದುವರೆದಿದೆ ಎಂದು ಹೇಳಿದರು.
ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ಆಕ್ಸ್ಫರ್ಡ್ ವೈದ್ಯಕೀಯ ಆಸ್ಪತ್ರೆ ದಕ್ಷಿಣ ಭಾಗದ ಸುತ್ತಮುತ್ತ ಹಳ್ಳಿ ಗಳಿಗೆ ಪ್ರದೇಶಗಳಿಗೆ ತುಂಬಾ ಉಪಯುಕ್ತವಾಗುತ್ತಿದೆ ಏಕೆಂದರೆ ಪ್ರಸ್ತುತ ಬೆಂಗಳೂರಿನ ಜನಸಂಖ್ಯೆ ಕೋಟಿ ದಾಟಿ 2 ಕೋಟಿ ಸಮೀಪಿಸುತ್ತಿದೆ. ಅದಲ್ಲದೆ ಬೆಂಗಳೂರಿನಲ್ಲಿ ವಾಹನ ದಟ್ಟಣೆಯಿಂದ ಹೊರವಲಯದ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳು ಜನರಿಗೆ ಅನುಕೂಲವಾಗುತ್ತಿದೆ ಎಂದು ಹೇಳಿದರು. ಹಾಗೆಯೇ ಆಕ್ಸ್ಫರ್ಡ್ ವೈದ್ಯಕೀಯ ಆಸ್ಪತ್ರೆಯಲ್ಲಿ ದೊರಕುವ ಚಿಕಿತ್ಸಾ ವಿವರಗಳನ್ನು ಒಂದೊಂದಾಗಿ ತಿಳಿಸಿದರು ಹಾಗೆ ಈ ಆಸ್ಪತ್ರೆಯಲ್ಲಿ ತಂತ್ರಜ್ಞಾನ ಜೊತೆಗೆ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಆಕ್ಸ್ಫರ್ಡ್ ಸಮೂಹ ವಿದ್ಯಾಸಂಸ್ಥೆಗಳ ಚೇರ್ಮನ್ ಗಳಾದ ರಮೇಶ್ ರಾಜು, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರು ಹಾಗೂ ಇತರೆ ಸಿಬ್ಬಂದಿಗಳು ಹಾಜರಿದ್ದರು.

Related